ಬ್ರೇಕಿಂಗ್ ನ್ಯೂಸ್
08-08-21 09:35 pm Headline Karnataka News Network ಕರ್ನಾಟಕ
ಶಿವಮೊಗ್ಗ, ಆಗಸ್ಟ್ 8: ಒಂದು ಕಾಲದಲ್ಲಿ ನಮ್ಮ ಕಾರ್ಯಕರ್ತರ ಕೊಲೆ ಮಾಡುತ್ತಿದ್ದರು. ಆಗ ನಮಗೆ ಶಕ್ತಿ ಇರಲಿಲ್ಲ, ಶಕ್ತಿ ಇಲ್ಲ ಶಾಂತವಾಗಿರಿ ಎಂದು ನಾಯಕರು ಹೇಳುತ್ತಿದ್ದರು. ಈಗ ನಮ್ಮ ಮೈ ಯಾವನಾದರೂ ಮುಟ್ಟಲಿ ನೋಡೋಣ. ನಮ್ಮ ಸೈನಿಕ ಸತ್ತರೇ ಅಲ್ಲೇ ಹೆಣ ಬಿದ್ದಿರುತ್ತಿದ್ದ ಸಂದರ್ಭ ಆಗ ಇತ್ತು. ಈಗ ಇಲ್ಲ.. ಮೋದಿ ಬಂದ ಬಳಿಕ ಒಬ್ಬ ಸೈನಿಕ ಕೊಲೆ ಮಾಡಿದ್ರೆ ಒಂದಕ್ಕೆ ಹತ್ತು ತೆಗೆಯಿರಿ ಎಂದಿದ್ದಾರೆ. ಈಗ ನಮಗೆ ಶಕ್ತಿ ಇದೆ. ಇಡೀ ದೇಶದಲ್ಲಿ ಬೆಳೆದಿದ್ದೇವೆ, ನಾವಾಗಿ ನಾವು ಕೊಲೆ ಮಾಡಲ್ಲ, ಹಿಂಸೆ ಮಾಡಲ್ಲ. ನಮ್ಮ ಸುದ್ದಿಗೆ ಬಂದರೆ ಬ್ರಹ್ಮ ಬಂದರು ಬಿಡಲ್ಲ.
ಹೀಗೆಂದು ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಹಳೆಯ ಉಗ್ರ ಭಾಷಣವನ್ನು ಮತ್ತೆ ಬಿಗಿದಿದ್ದಾರೆ. ಬಿಜೆಪಿ ಶಿವಮೊಗ್ಗ ನಗರ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರಪ್ಪ ಭಾಷಣದಲ್ಲಿ ಪ್ರತಾಪ ತೋರಿದ್ದಾರೆ.
ಕೇರಳದಲ್ಲಿ ಆರ್ ಎಸ್ ಎಸ್ ಆರಂಭ ಮಾಡ್ತೀವಿ ಅಂತಾ ಯಾರಾದ್ರೂ ಕಾರ್ಯಕರ್ತ ಹೋದ್ರೆ, ಹಿಂದುತ್ವದ ಬಗ್ಗೆ ಮಾತನಾಡ್ತೀರಾ ಅಂತಾ ಕೊಲೆಗಳನ್ನು ಮಾಡ್ತಿದ್ದರು. ಅವರಿಗೆ ವಾಪಸ್ ಹೊಡೆಯಲು ಆಗ ನಮಗೆ ಶಕ್ತಿ ಇರಲಿಲ್ಲ. ಆ ಸಂದರ್ಭದಲ್ಲಿ ಒಬ್ಬನ ಕೊಲೆ ಸಹ ಆಗುತ್ತಿತ್ತು. ಆಗ ನಮ್ಮ ಸಂಘದ ಮುಖಂಡರು ಹೇಳುತ್ತಿದ್ದರು. ಅವರು ಹೊಡೆಯಲಿ, ಕೊಲೆ ಮಾಡಲಿ ಸುಮ್ಮನಿರಿ ಅಂತ. ಯಾಕಂದ್ರೆ ನಮ್ಮ ಬಳಿ ಅಷ್ಟೊಂದು ಶಕ್ತಿ ಇರಲಿಲ್ಲ. ಇಂದು ಲಕ್ಷ ಲಕ್ಷ ಜನ ಬಿಜೆಪಿ ಸೇರುತ್ತಿದ್ದಾರೆ. ಹಿಂದುತ್ವದ ಮೆರವಣಿಗೆ ಅಂದ್ರೆ ಕಲ್ಪನೆ ಮಾಡದಷ್ಟು ಜನ ಸೇರುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಇಂದು ಬಿಜೆಪಿ ಸಾಕಷ್ಟು ಬೆಳೆದು ನಿಂತಿದೆ. ಯಾವುದೇ ಮೂಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿದರೇ ಇವತ್ತು ಏನು ತೀರ್ಮಾನ. ಅಂದು ಬಿ ಕಾಮ್ ಅಟ್ ಎನಿಕಾಸ್ಟ್, ಇಂದು ಫೇಸ್ ವಿತ್ ದಿ ಸೇಮ್ ಸ್ಟಿಕ್.. ಯಾವುದರಲ್ಲಿ ಹೊಡೆಯುತ್ತಾರೆ ಅದರಲ್ಲೇ ಹೊಡೆದು ಒಂದಕ್ಕೆ ಎರಡು ತೆಗೆದು ಬಿಡಿ.
ಯಾರು ಹೇಳೋದು ಬೇಡ ಅಷ್ಟು ಶಕ್ತಿಶಾಲಿ ಆಗಿ ನಾವು ಬೆಳೆದು ಬಿಟ್ಟಿದ್ದೇವೆ. ಯಾಕಂದ್ರೆ ಇವತ್ತು ನಮ್ಮ ಸುದ್ದಿಗೆ ಯಾರೂ ಬರಲ್ಲ. ಕೇರಳದಲ್ಲಿ ಚುನಾವಣೆಯಲ್ಲಿ ಗೆಲ್ಲದೇ ಇರಬಹುದು. ಆದರೆ ಹಿಂದುತ್ವದ ದೊಡ್ಡ ಅಲೆ ಏಳುತ್ತಿದೆ. ಮುಸಲ್ಮಾನರು, ಕ್ರಿಶ್ಚಿಯನ್ನರಿಗೆ ರಾಷ್ಟ್ರೀಯ ವಿಚಾರ ಒಪ್ಪಿಸುವ ಶಕ್ತಿ ನಮಗೆ ಇನ್ನೂ ಬಂದಿಲ್ಲ. ಆದರೆ ನಮ್ಮ ಪರವಾಗಿ ಯಾರೂ ಊಹಿಸದಷ್ಟು ಜನ ಬೆಂಬಲ ನೀಡುತ್ತಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ದೊಡ್ಡ ದೊಡ್ಡ ನಟರು ಸೋತರು. ಅವರನ್ನು ಸೋಲಿಸಿದ್ದು ಬಿಜೆಪಿಯ ಹೆಣ್ಣು ಮಕ್ಕಳು ಎಂದು ಸೂಚ್ಯವಾಗಿ ಹೇಳಿದರು.
K S Eshwarappa makes controversial statements says let RSS touch BJP we will show our power
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm