ಬ್ರೇಕಿಂಗ್ ನ್ಯೂಸ್
04-08-21 03:33 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 4: ಭಾರೀ ಭ್ರಷ್ಟಾಚಾರ ನಡೆಸಿದ ಆರೋಪಕ್ಕೀಡಾಗಿದ್ದ ಶಶಿಕಲಾ ಜೊಲ್ಲೆ ಸಂಪುಟಕ್ಕೆ ಸೇರ್ಪಡೆಯಾಗಿದ್ದು ಬಿಜೆಪಿಯಲ್ಲೇ ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಶಶಿಕಲಾ ಜೊಲ್ಲೆಗೆ ಈ ಬಾರಿ ಸ್ಥಾನ ಸಿಗಲ್ಲ ಎಂದೇ ಮೊದಲಿನಿಂದಲೂ ಕೇಳಿಬಂದಿತ್ತು. ಅವರ ಬದಲಿಗೆ ಚಿತ್ರದುರ್ಗ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೆ ಸ್ಥಾನ ಸಿಗುವುದು ಖಚಿತವಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಶಶಿಕಲಾ ಜೊಲ್ಲೆ ಅವರನ್ನೇ ಉಳಿಸಿಕೊಳ್ಳಲು ಯಾರ ಕೈ ಕೆಲಸ ಮಾಡಿದೆ ಎನ್ನುವ ಕುತೂಹಲ ಎದ್ದಿದೆ.


ಶಶಿಕಲಾ ಜೊಲ್ಲೆಗೆ ಮತ್ತೆ ಸ್ಥಾನ ಸಿಗುವಂತೆ ಮಾಡಲು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರಭಾವ ಕೆಲಸ ಮಾಡಿದೆ ಎನ್ನುವ ಮಾತು ಕೇಳಿಬಂದಿದೆ. ಬಿ.ಎಸ್. ಯಡಿಯೂರಪ್ಪ ಪಟ್ಟಿಯಲ್ಲಿ ಜೊಲ್ಲೆ ಹೆಸರನ್ನು ಕೈಬಿಟ್ಟು ಪೂರ್ಣಿಮಾ ಶ್ರೀನಿವಾಸ್ ಗೆ ನೀಡುವ ಬಗ್ಗೆ ಖಾತ್ರಿ ಮಾಡಿದ್ದರು. ನಿನ್ನೆ ರಾತ್ರಿಯ ವರೆಗೂ ಜೊಲ್ಲೆ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಇರಲಿಲ್ಲ. ಆದರೆ, ಕೊನೆಯ ರಾತ್ರಿಯಲ್ಲಿ ಹಲವರ ಹೆಸರು ಅದಲು ಬದಲಾಗಿತ್ತು.

ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಸಂಸದರಾಗಿದ್ದಾರೆ. ಕುಟುಂಬ ರಾಜಕಾರಣ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿಕೊಂಡೇ ಬಂದ ಬಿಜೆಪಿ ಒಂದೇ ಮನೆಯ ಇಬ್ಬರಿಗೆ ಸ್ಥಾನ ನೀಡಿದೆ. ಅಲ್ಲದೆ, ಭ್ರಷ್ಟಾಚಾರ ಸಹಿಸುವುದಿಲ್ಲ ಎನ್ನುತ್ತಲೇ ಮೊನ್ನೆ ಮೊನ್ನೆ ಮಾತೃಪೂರ್ಣ ಯೋಜನೆಯಲ್ಲಿ ಮೊಟ್ಟೆ ಟೆಂಡರ್ ನೀಡಿಕೆಯಲ್ಲಿ ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿದ್ದು ವಾಹಿನಿಯೊಂದರ ಹಿಡನ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೇ ಕಾರಣಕ್ಕೆ ಶಶಿಕಲಾ ಜೊಲ್ಲೆಗೆ ಈ ಬಾರಿ ಸಚಿವ ಸ್ಥಾನ ಸಿಗಲಾರದು ಎಂದೇ ವಾದಿಸಲಾಗಿತ್ತು. ಬಿಜೆಪಿಯಲ್ಲಿ ಬೇರೆ ಮಹಿಳಾ ಶಾಸಕಿಯರಿದ್ದರೂ, ಶಶಿಕಲಾಗೆ ಮತ್ತೆ ಮಣೆ ಹಾಕಿದ್ದು ಬಿಜೆಪಿ ಒಳಗೇ ಭಾರೀ ಮುಜುಗರ ಸೃಷ್ಟಿಸಿದೆ.

ಮೈಸೂರಿನ ಎಸ್.ಎ.ರಾಮದಾಸ್ ಕೂಡ ಸಚಿವರಾಗುವುದು ಖಚಿತ ಆಗಿತ್ತು. ಇದೇ ಮಾತನ್ನು ಸ್ವತಃ ರಾಮದಾಸ್ ಕೂಡ ಹೇಳಿಕೊಂಡಿದ್ದಾರೆ. ನಿನ್ನೆ ರಾತ್ರಿ ವರೆಗೂ ನನ್ನ ಹೆಸರು ಸಚಿವರ ಪಟ್ಟಿಯಲ್ಲಿತ್ತು. ಆದರೆ ರಾತ್ರಿ ಬೆಳಗಾಗುವುದರ ಒಳಗೆ ಹೆಸರು ತಪ್ಪಿದೆ. ಯಡಿಯೂರಪ್ಪ ರಾಮದಾಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಆದರೆ, ಕೊನೆಯ ವೇಳೆಗೆ ರಾಮದಾಸ್ ಹೆಸರೂ ಬದಲಾಗಿದೆ.
Minister for Women and Child Development Shashikala Jolle of corruption in free egg distribution scheme is now in New Cabinet of Karnataka.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am