ಬ್ರೇಕಿಂಗ್ ನ್ಯೂಸ್
04-08-21 01:03 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 4: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ಸಚಿವರಾಗುವುದು ಖಾತ್ರಿಯಾಗಿದೆ. 29 ಮಂದಿ ನೂತನ ಸಚಿವರು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗರಿಗೆ ಸಂಪುಟದಲ್ಲಿ ಸಿಂಹಪಾಲು ಸಿಕ್ಕಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅಣತಿಯಲ್ಲೇ ಸಂಪುಟಕ್ಕೆ ಯಾರು ಸೇರಬೇಕೆಂದು ನಿರ್ಣಯ ಮಾಡಲಾಗಿದೆ. ಯಡಿಯೂರಪ್ಪ ಸರಕಾರದಲ್ಲಿ ಹಿರಿಯ ಸಚಿವರಾಗಿದ್ದ ಆರು ಮಂದಿಯನ್ನು ಸಂಪುಟದಿಂದ ಹೊರಗಿಡಲಾಗಿದೆ. ಕಳೆದ ಬಾರಿ ಸಚಿವರಾಗಿದ್ದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಆರ್. ಶಂಕರ್, ಯೋಗೀಶ್ವರ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ.
ಹೊಸ ಸಂಪುಟದಲ್ಲಿ ಕರಾವಳಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಎಸ್. ಅಂಗಾರ ಸಚಿವರಾಗುತ್ತಿದ್ದಾರೆ. ಗೋವಿಂದ ಕಾರಜೋಳ, ಆನಂದ್ ಸಿಂಗ್, ಆನಂದ್ ಸಿಂಗ್, ಬಿ.ಸಿ. ಪಾಟೀಲ್, ಆರ್. ಅಶೋಕ್, ಬೈರತಿ ಬಸವರಾಜು, ಶಶಿಕಲಾ ಜೊಲ್ಲೆ, ಜೆ.ಸಿ. ಮಾಧುಸ್ವಾಮಿ, ಅಶ್ವತ್ಥ್ ನಾರಾಯಣ, ನಾರಾಯಣ ಗೌಡ, ಆರಗ ಜ್ಞಾನೇಂದ್ರ, ಎಸ್.ಟಿ ಸೋಮಶೇಖರ್, ಕೆ.ಎಸ್. ಈಶ್ವರಪ್ಪ , ಎಂಟಿಬಿ ನಾಗರಾಜ್, ಮುನಿರತ್ನ, ವಿ.ಸೋಮಣ್ಣ , ಮುರುಗೇಶ್ ನಿರಾಣಿ, ಶಂಕರ ಪಾಟೀಲ್ ಮುನೇನಕೊಪ್ಪ, ಸಿಸಿ ಪಾಟೀಲ್, ಶ್ರೀರಾಮುಲು, ಕೆ.ಗೋಪಾಲಯ್ಯ, ಶಿವರಾಮ ಹೆಬ್ಬಾರಿ, ಬಿ.ಸಿ.ನಾಗೇಶ್ ಅವರಿಗೆ ಸ್ಥಾನ ಸಿಕ್ಕಿದೆ ಎನ್ನುವ ಮಾಹಿತಿ ಸಿಕ್ಕಿದೆ. ಲಿಂಗಾಯತ ಕೋಟಾದಲ್ಲಿ ಎಂಟು ಮಂದಿಗೆ ಸ್ಥಾನ ಸಿಕ್ಕಿದ್ದರೆ, ಒಕ್ಕಲಿಗ ಕೋಟಾದಲ್ಲಿ ಏಳು ಮಂದಿಗೆ ಸ್ಥಾನ ಸಿಕ್ಕಿದೆ. ಯಾರಿಗೆ ಡಿಸಿಎಂ
ಯಡಿಯೂರಪ್ಪ ವಿರೋಧಿಗಳಿಗಿಲ್ಲ ಸ್ಥಾನ
ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರಿಗೆ ಸಚಿವ ಸ್ಥಾನ ಖಚಿತ ಎನ್ನುವ ಮಾಹಿತಿಗಳಿದ್ದವು. ಆದರೆ, ಸಂಪುಟದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಅದರ ಜೊತೆಗೆ ಯಡಿಯೂರಪ್ಪ ವಿರೋಧಿಯಾಗಿ ಗುರುತಿಸಿದ್ದ ಯೋಗೀಶ್ವರ್ ಅವರಿಗೂ ಸ್ಥಾನ ಸಿಕ್ಕಿಲ್ಲ. ಅರವಿಂದ ಬೆಲ್ಲದ್ ಹೆಸರು ಸಿಎಂ ಸ್ಥಾನಕ್ಕೇ ರೇಸಿನಲ್ಲಿತ್ತು. ಆನಂತರ ಆರೆಸ್ಸೆಸ್ ಬೆಂಬಲ ಹೊಂದಿದ್ದ ಬೆಲ್ಲದ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿತ್ತು. ಆದರೆ, ಬೆಲ್ಲದ ಅವರಿಗೂ ಸಚಿವ ಸ್ಥಾನ ತಪ್ಪಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಬದಲಿಗೆ ಎಸ್.ಎ ರಾಮದಾಸ್ ಅವರಿಗೆ ಬ್ರಾಹ್ಮಣ ಕೋಟಾದಲ್ಲಿ ಸ್ಥಾನ ಖಚಿತ ಎನ್ನಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ರಾಮದಾಸ್ ಗೆ ಸ್ಥಾನವೂ ತಪ್ಪಿದೆ. ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಚಿವ ಸ್ಥಾನ ಎನ್ನುವ ಮಾತುಗಳಿದ್ದವು. ಆದರೆ, ಬ್ರಾಹ್ಮಣ ಕೋಟಾದಲ್ಲಿ ಶಿವರಾಮ ಹೆಬ್ಬಾರ್ ಮತ್ತು ಬಿ.ಸಿ ನಾಗೇಶ್ ಅವರಿಗೆ ಸ್ಥಾನ ನೀಡಲಾಗಿದೆ. ಸಂಪುಟ ಲಿಸ್ಟ್ ಹೊರಬೀಳುತ್ತಿದ್ದಂತೆ ಕಲಬುರ್ಗಿ ಸೇರಿದಂತೆ ವಿವಿಧ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧೆಡೆ ಪ್ರತಿಭಟನೆಗಳು ನಡೆದಿವೆ. ರಾಮದಾಸ್ ತನಗೆ ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಟಾಂಗ್ ನೀಡಿದ್ದಾರೆ.
Karnataka chief minister said that 29 MLAs, who will be inducted into new Karnataka cabinet, will take oath today. "I've sent names to the governor. This time, party high command has said that there'll be no deputy CM," he said. The CM added that seven OBCs, three SCs, one ST, seven Vokkaligas, eight Linagayats, one Reddy and one woman are part of the cabinet. Sunil kumar, Kota Poojary, Angara from Dakshina Kannada to enter cabinet.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm