ಬ್ರೇಕಿಂಗ್ ನ್ಯೂಸ್
22-07-21 05:04 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 22: ಯಡಿಯೂರಪ್ಪ ಪರವಾಗಿ ಲಿಂಗಾಯತ ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ಯಡಿಯೂರಪ್ಪ ಸಿಎಂ ಆಗುವಾಗ ಇವರು ಸ್ವಾಮೀಜಿಗಳೇನಾದ್ರೂ ಬಂದಿದ್ದಾರೆಯೇ ? ಅಥವಾ ಇವರದೇ ಸಮುದಾಯದ ಶಾಸಕರು ಏನೆಲ್ಲಾ ಹೇಳಿಕೆ ನೀಡುತ್ತಿದ್ದಾಗ ಕರೆದು ಬುದ್ಧಿ ಹೇಳಿದ್ದಾರೆಯೇ ? ಆಗ ಯಾಕೆ ಇವರೆಲ್ಲ ಯಡಿಯೂರಪ್ಪ ಪರವಾಗಿ ನಿಂತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಇವತ್ತು ಆಡಿರುವ ಮಾತುಗಳನ್ನು ತುಂಬ ಶ್ಲಾಘಿಸುತ್ತೇನೆ. ಅವರೊಬ್ಬ ಮುತ್ಸದ್ಧಿ. ಅವರೊಂದಿಗೆ ಬಿಜೆಪಿಯಲ್ಲಿ ಕೇವಲ ನಾಲ್ಕು ಶಾಸಕರು ಇದ್ದಾಗಿನಿಂದಲೂ ಇದ್ದೇನೆ. ಅವರು ಮೊದಲಿನಿಂದಲೂ ರೈತರು ಪರವಾಗಿ ಹೋರಾಟ ಮಾಡಿಕೊಂಡು ಬಂದವರು. ಕೆಲವೊಮ್ಮೆ ಯಾರದ್ದೋ ಮಾತು ಕೇಳಿ, ಎಡವಿದ್ದಾರೆ. ಕೆಜೆಪಿ ಹೋದಾಗ, ಯಾರದ್ದೋ ಮಾತು ಕೇಳಿ ಹೋಗಿದ್ದೆ ಎಂದು ಆಬಳಿಕ ಹೇಳಿದ್ದರು. ಆಮೇಲೆ ಬಿಜೆಪಿಯನ್ನು ಮತ್ತೆ ಕಟ್ಟೋಣ ಎಂದು ರಾಜ್ಯದಾದ್ಯಂತ ಓಡಾಡಿದ್ದರು. ಇವತ್ತು ಪಕ್ಷ ನನ್ನ ತಾಯಿ, ಪಕ್ಷದ ರಾಷ್ಟ್ರೀಯ ಮುಖಂಡರು ಏನು ಹೇಳುತ್ತಾರೋ ಅದಕ್ಕೆ ಬದ್ಧನಿದ್ದೇನೆ ಎಂದು ಹೇಳಿದ್ದು ಇಡೀ ದೇಶಕ್ಕೆ ಮಾದರಿ ಎಂದು ಈಶ್ವರಪ್ಪ ಹೇಳಿದರು.
ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಹಿನ್ನೆಲೆಯಲ್ಲಿ ಸಭಾಂಗಣ ಪ್ರವೇಶ ಮಾಡುತ್ತಿದ್ದಂತೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದಕ್ಕೆ ಮೇಲಿನಂತೆ ಹೇಳಿದರು. ಯಾರು ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ, ಅದನ್ನೆಲ್ಲ ಕೇಳಬಾರದು. ಪಕ್ಷ ಏನು ಹೇಳುತ್ತದೋ ನಾವದನ್ನು ಪಾಲಿಸುತ್ತೇವೆ. ಹೈಕಮಾಂಡ್ ಏನು ಹೇಳುತ್ತೋ ಗೊತ್ತಿಲ್ಲ ಎಂದು ಹೇಳಿದರು.
Eshwarappa bats for BSY slams Lingayat pontiffs. Amid speculations that his exit was on the cards, several pontiffs made a beeline to Karnataka Chief Minister B S Yediyurappa's official residence for the second consecutive day on Wednesday and threw their weight behind him.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm