ಬ್ರೇಕಿಂಗ್ ನ್ಯೂಸ್
14-07-21 01:12 pm Headline Karnataka News Network ಕರ್ನಾಟಕ
ಚಿತ್ರದುರ್ಗ, ಜುಲೈ 14: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು, ಹಿಂದುಳಿದವರ ಪರ ಹೋರಾಟ ಮಾಡಿ ಮೇಲೆ ಬಂದ ದೊಡ್ಡ ಲೀಡರ್. ಅಂಥವರಿಗೆ ಗೌರವ ನೀಡುವುದು ನಮ್ಮ ಸಂಪ್ರದಾಯ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳುವ ಮೂಲಕ ರಾಜಕೀಯ ಅಚ್ಚರಿ ಮೂಡಿಸಿದ್ದಾರೆ.
ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಹಿರೇಹಳ್ಳಿ ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಬಿ. ಶ್ರೀರಾಮುಲು, ಈ ಕುರಿತು ಉಮೇಶ್ ಅಣ್ಣ ಅವರನ್ನ ಕೇಳಿದರೆ ಸರಿ ಇರುತ್ತದೆ, ಈ ಕುರಿತು ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಉಮೇಶ್ ಕತ್ತಿ ನನ್ನ ದೋಸ್ತ್ ಇದ್ದಾನೆ, ಅವರಲ್ಲೇ ಕೇಳಿ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರಂತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು, ಕಳೆದ ಚುನಾವಣೆಯಲ್ಲಿ ನಮ್ಮಂತಹ ವಾಲ್ಮೀಕಿ ಸಮುದಾಯಕ್ಕೆ ಎರಡು ಕ್ಷೇತ್ರ ಸ್ಪರ್ಧೆಗೆ ಅವಕಾಶ ಸಿಕ್ಕಿತು. ನೆಹರೂ, ಇಂದಿರಾ ಗಾಂಧಿ ಫ್ಯಾಮಿಲಿ ಎರಡು ಕಡೆ ಸ್ಪರ್ಧೆ ಮಾಡಿದ ವಿಷಯವನ್ನ ಕೇಳಿದ್ದೆ. ಸಿದ್ದರಾಮಯ್ಯರಂತಹ ದೊಡ್ಡವರು ಎರಡು ಕಡೆ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಎರಡು ಕಡೆ ಸ್ಪರ್ಧೆಗೆ ಅವಕಾಶ ಸಿಕ್ಕಿತ್ತು. ಬಾದಾಮಿ ಜನರು ನನ್ನನ್ನು ಗೆಲ್ಲಿಸೋಕೆ ಬಹಳ ಪ್ರಯತ್ನಿಸಿದರು. ಆದರೆ ಸ್ಪಲ್ಪದರಲ್ಲೇ ಸೋಲಾಯ್ತು. ಚುನಾವಣೆ ಸಂದರ್ಭಗಳಲ್ಲಿ ಜನರು ಹಣೆಬರಹ ಬರೆಯುತ್ತಾರೆ ಎಂದು ಹೇಳಿದರು.
ಆದರೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಖಾರ ಉತ್ತರ ನೀಡುತ್ತಿದ್ದ ಕಾಲೆಳೆದು ಪ್ರತಿಕ್ರಿಯೆ ನೀಡುತ್ತಿದ್ದ ಸಚಿವ ಬಿ. ಶ್ರೀರಾಮುಲು ಈ ಬಾರಿ ಮಾತ್ರ ಸ್ವಲ್ಪ ಮೆತ್ತಗಾಗಿದ್ದಾರೆ. ಸಿದ್ದರಾಮಯ್ಯ ಅವರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ ಅನ್ನೋದು ಅವರ ಹೇಳಿಕೆಗಳಿಂದಲೇ ಕಂಡುಬರುತ್ತಿದೆ.
ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಇಬ್ಬರೂ ಹಿಂದುಳಿದ ಸಮುದಾಯದವರು, ಸಿದ್ದರಾಮಯ್ಯ ಅನೇಕ ವರ್ಷಗಳ ಕಾಲ ಹೋರಾಟ ಮಾಡಿಕೊಂಡು ಬಂದ ದೊಡ್ಡ ನಾಯಕ. ಸಿದ್ದರಾಮಯ್ಯ ಸೀನಿಯರ್ ಲೀಡರ್, ಬಡವರ ಪರ, ಹಿಂದುಳಿದವರ ಪರ ಇರುವವರು. ಅಂಥವರಿಗೆ ನಾನು ಗೌರವ ನೀಡುತ್ತೇನೆ. ನಮ್ಮ ಸಂಪ್ರದಾಯ, ರಾಜಕೀಯ, ಪಕ್ಷದ ಸಿದ್ದಾಂತಗಳು ಬೇರೆ. ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನ ವಿರೋಧಿಸುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬಗ್ಗೆ ಮೆತ್ತಗಿನ ಪ್ರತಿಕ್ರಿಯೆಯನ್ನು ಶ್ರೀರಾಮುಲು ನೀಡಿರುವುದು ಅಚ್ಚರಿ ಮೂಡಿಸಿದೆ.
Minister B Sriramulu says he respects Siddaramaiah for his Personality.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm