ಬ್ರೇಕಿಂಗ್ ನ್ಯೂಸ್
12-06-21 11:37 am Headline Karnataka News Network ಕರ್ನಾಟಕ
ಚಿಕ್ಕಬಳ್ಳಾಫುರ, ಜೂನ್ 12: ಲಾಕ್ಡೌನ್ ಕಾರಣದಿಂದಾಗಿ ಟೊಮ್ಯಾಟೊ ಧಾರಣೆಯಲ್ಲಿ ತೀವ್ರ ಕುಸಿತವಾಗಿದ್ದು ರೈತರು ತಾವು ಬೆಳೆದ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಹೋಗಿದ್ದಾರೆ.
ಟೊಮ್ಯಾಟೋವನ್ನು ಕೊಳ್ಳುವವರೇ ಇಲ್ಲದೆ, ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆ ಹೊರಗಡೆ ರಸ್ತೆಯಲ್ಲಿ ಸುರಿಯಲಾಗಿದೆ. ರಸ್ತೆಗೆ ಸುರಿದಿರುವ ಟೊಮ್ಯಾಟೋ ರಾಶಿ ದನಗಳಿಗೂ ಬೇಡವಾಗಿದೆ. ರಾಶಿ ಹಾಕಿದ ಹಸಿ ಹಸಿ ಟೊಮ್ಯಾಟೋ ಹಣ್ಣುಗಳನ್ನು ಹಸುಗಳು ತಿನ್ನುತ್ತಿದ್ದು ಹೊಟ್ಟೆ ತುಂಬಿದ ಬಳಿಕ ಹಾಗೇ ಬಿಟ್ಟುಬಿಟ್ಟಿದೆ.
ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 15 ಕೇಜಿಯ ಟೊಮ್ಯಾಟೋ ಬಾಕ್ಸಿಗೆ ಕೇವಲ 50 ರೂ. ಬೆಲೆಯಿದ್ದು ಅಷ್ಟಕ್ಕೂ ಕೊಳ್ಳುವವರಿಲ್ಲದಂತಾಗಿದೆ. ಹೀಗಾಗಿ ರಾಶಿ ರಾಶಿ ಟೊಮ್ಯಾಟೋಗಳನ್ನು ಎಪಿಎಂಸಿ ಮಾರುಕಟ್ಟೆಗೆ ರೈತರು ಹೊರಗಡೆ ಸುರಿದು ಹೋಗಿದ್ದಾರೆ. ಕೇಜಿ ಟೊಮ್ಯಾಟೋ ಬೆಲೆ 3 ರೂಪಾಯಿಗೆ ಕುಸಿದಿದ್ದು ಪಿಕಪ್, ಟೆಂಪೋಗಳಲ್ಲಿ ಮಾರುಕಟ್ಟೆಗೆ ತಂದವರು ವಾಹನ ಬಾಡಿಗೆಯ ಹಣವೂ ಸಿಗದೆ ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯ ಹೊರಗಡೆಯಲ್ಲಿ ರಾಶಿಗಟ್ಟಲೆ ಟೊಮ್ಯಾಟೋ ಬಿದ್ದಿದ್ದು ರೈತರ ಸ್ಥಿತಿ ಹೀನಾಯ ಎನ್ನುವಂತಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದು ಈಗ ಬೆಳೆಯ ಸೀಸನ್. ಆದರೆ, ಲಾಕ್ಡೌನ್ ಕಾರಣದಿಂದಾಗಿ ಟೊಮ್ಯಾಟೋಗೆ ಬೆಲೆ ಇಲ್ಲದೆ, ರೈತರು ಕಂಗಾಲಾಗಿದ್ದು ವಾಹನಗಳಲ್ಲಿ ತಂದ ಬೆಳೆಯನ್ನು ದಿನವೂ ರಸ್ತೆಯಲ್ಲೇ ಸುರಿದು ಹೋಗುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗಿಲ್ಲದ ಪರಿಸ್ಥಿತಿ. ಸರಕಾರದ ಕಡೆಯಿಂದ ರೈತರಿಂದ ನೇರವಾಗಿ ಖರೀದಿಸಿ ತಲುಪಿಸುವ ಕಾರ್ಯ ಮಾಡಬಹುದು. ಆದರೆ, ಎಪಿಎಂಸಿಯಾಗಲೀ, ಇತರೇ ಮಾರುಕಟ್ಟೆ ವ್ಯಾಪಾರಸ್ಥರಾಗಲೀ ಆ ಕೆಲಸವನ್ನು ಮಾಡಿಲ್ಲ.
Video: Click
Supply chain distortion of farm produce owing to the lockdown over COVID-19 has hurt both farmers and consumers. There have been reports from across the state of farmers, in despair, destroying their own crop in chikkaballapur
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm