ಬ್ರೇಕಿಂಗ್ ನ್ಯೂಸ್
10-08-24 08:37 pm HK News Desk ಕರ್ನಾಟಕ
ಮೈಸೂರು, ಆಗಸ್ಟ್ 10: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್- ಬಿಜೆಪಿ ದೋಸ್ತಿ ಪಕ್ಷಗಳ ವತಿಯಿಂದ ನಡೆದ ಮೈಸೂರು ಚಲೋ ಪಾದಯಾತ್ರೆ ಸಮಾರೋಪಗೊಂಡಿದೆ. ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ದೋಸ್ತಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಡಿಕೆಶಿ ಮಾತನಾಡಿದ್ದ ಅದೇ ವೇದಿಕೆಯಲ್ಲಿ ಇಂದು ಮಾತನಾಡಿದ ಹೆಚ್‌ಡಿಕೆ, “ನನ್ನ ಅಣ್ಣನ ಮಗನನ್ನು ನಾನು ಜೈಲಿಗೆ ಕಳುಹಿಸಿದ್ದೀನಿ ಅಂತ ಹೇಳಿದ್ದೀರಿ. ಅಣ್ಣನ ಇಬ್ಬರು ಮಕ್ಕಳನ್ನು ಜೈಲಿಗೆ ಹಾಕಿದ್ದು ಯಾರು, ಇವರೇ ಅಲ್ವಾ.. ನಾನು ಚಾಮುಂಡೇಶ್ವರಿ ಸನ್ನಿದಾನದಲ್ಲಿ ನಿಂತು ಮಾತಾಡ್ತಿದ್ದೇನೆ. ಕಾಫಿ ಡೇ ಸಿದ್ದಾರ್ಥ ಸಾವಿಗೆ ಕಾರಣ ಯಾರು ಅಂತಾ ಹೇಳ್ತೀರಾ?” ಅಂತ ಡಿಕೆಶಿಗೆ ಪ್ರಶ್ನೆ ಎಸೆದಿದ್ದಾರೆ.
ಜೇಡರಹಳ್ಳಿ ಅಂತಾ ಬೆಂಗಳೂರಲ್ಲಿ ಇದೆ, ವಾಸು ಅನ್ನೋರ ಜೊತೆ ಸೇರ್ಕೊಂಡು ಮ್ಯಾನ್ ಹೋಲ್ ಚೇಂಬರ್‌ಗಳನ್ನು ಕದ್ದು ಮಾರಾಟ ಮಾಡ್ತಿದ್ದವನು ಇದೇ ಶಿವಕುಮಾರ್. ಈವಾಗ ದೇವೇಗೌಡ್ರು, ಕುಮಾರಸ್ವಾಮಿ ಬಗ್ಗೆ ಮಾತಾಡ್ತೀಯಾ? ಯಾವ ನೈತಿಕತೆ ಇದೆ ನಿನಗೆ? ದೇವೇಗೌಡರು ಡಿಪ್ಲೊಮಾ ಮಾಡಿ ಇಂಜಿನಿಯರ್ ಆಗಿದ್ದವರು. ಈ ಶಿವಕುಮಾರ್ ಅಪ್ಪನಲ್ಲಿ ಏನಿತ್ತು ಹೇಳಿ. ಎಲ್ಲಿಂದ ಮಾಡಿದ್ರು ಇಷ್ಟೆಲ್ಲಾ.. ಕೊತ್ವಾಲನ ಜೊತೆಗಿದ್ದವನನ್ನು ರಾಜಕೀಯಕ್ಕೆ ಕರೆತಂದಿದ್ದು ಎಸ್ಸೆಂ ಕೃಷ್ಣ. ಆದರೆ ಅದೇ ಕುಟುಂಬದ ಶ್ರಮಜೀವಿ ಸಿದ್ಧಾರ್ಥ್ ಸಾವಿಗೆ ಯಾರು ಕಾರಣ ಅಂತ ಜನರ ಮುಂದೆ ಹೇಳ್ತೀರಾ ಎಂದು ಪ್ರಶ್ನೆ ಮಾಡಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದು ನೀವು ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಅಲ್ಲ, ನೀವು ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ತಮ್ಮ ಮೇಲೆ ಕಪ್ಪು ಚುಕ್ಕೆ ಇಲ್ಲ, ಕಪ್ಪು ಚುಕ್ಕೆ ಇಲ್ಲ ಅಂತಾರೆ, ಸಿದ್ದರಾಮಯ್ಯನವರ ಚಡ್ಡಿ ಕಪ್ಪು ಚುಕ್ಕೆ ಮಾಡ್ಕೊಂಡಿರಬಹುದು. ತೆರೆದ ಪುಸ್ತಕ ಅಂತಾರೆ. ಅರ್ಕಾವತಿ ಹಗರಣದಲ್ಲಿ ಕೆಂಪಣ್ಣ ಆಯೋಗದ ವರದಿಯನ್ನು ತೆರೆದಿಡಿ ಸಿದ್ದರಾಮಯ್ಯ ಅವರೇ ಅಂತ ಹೆಚ್‌ಡಿಕೆ ವ್ಯಂಗ್ಯವಾಡಿದರು.
ನಿಮ್ಮ ಧರ್ಮಪತ್ನಿಯವರ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ಅವರ ಬಗ್ಗೆ ಪ್ರಶ್ನೆ ಅಲ್ಲ. ಯಾರೋ ನಿಂಗರಾಜು, ದೇವರಾಜು ದಾನ ಕೊಟ್ಟಿದ್ದು ಅಂತೀರಲ್ಲಾ.. ಯಾವ ನಿಂಗರಾಜೂ ಇಲ್ಲ. ನೀವು ಸರ್ಕಾರಿ ಭೂಮಿಯನ್ನು ಕಬಳಿಸಿದ್ದೀರಿ. ಅದೀಗ ಹೊರಗೆ ಬಂದಿರೋದು. ಈಗ ಬಿಟ್ಟುಕೊಡುತ್ತೇನೆ ಅಂದರೆ ಏನರ್ಥ ? ಶ್ರಮ ಪಟ್ಟು ಕಾನೂನು ಪ್ರಕಾರ ಸೈಟ್ ಕೊಟ್ಟಿದ್ರೆ ನಾವು ಪ್ರಶ್ನೆ ಮಾಡ್ತಿರಲಿಲ್ಲ. ಆ ಭೂಮಿ ಸರ್ಕಾರದ ಭೂಮಿ, 1998-2000 ರಲ್ಲಿ ನಿವೇಶನ ಮಾಡಿ ಹಂಚಿಕೆ ಆಗಿತ್ತು. ನಿವೇಶನ ಹಂಚಿಕೆ ಆದಮೇಲೆ ನಿಮ್ಮ ಬಾಮೈದ ಹೇಗೆ ಸೈಟ್ ಪಡೆದರು…? ಅಂತ ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ರು.
ಯಡಿಯೂರಪ್ಪ ಫೋಟೊ ಇಟ್ಕೊಂಡು ಕಾಂಗ್ರೆಸಿನೋರು ಪೂಜೆ ಮಾಡಬೇಕು. 2013ರಲ್ಲಿ ಯಡಿಯೂರಪ್ಪ ಮತ್ತು ನಾವು ಹೋರಾಟ ಮಾಡಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಇವರ ಮುಖ ನೋಡಿ ಜನ ಓಟು ಕೊಟ್ಟಿದ್ದಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದೂ ಯಡಿಯೂರಪ್ಪ. ಅಂದು ವಚನ ಕೊಟ್ಟು ಪಾಲಿಸದೇ ದೊಡ್ಡ ತಪ್ಪು ಮಾಡಿದ್ದೆ. ಅದರ ಪರಿಣಾಮವನ್ನು 15 ವರ್ಷಗಳಿಂದ ಅನುಭವಿಸುತ್ತಿದ್ದೇನೆ. ಕಾಂಗ್ರೆಸ್ ಬೆಂಬಲದಲ್ಲಿ ಸಿಎಂ ಆದಾಗ ನನಗೆ ಕಿರುಕುಳ ಕೊಟ್ಟಿದ್ದು ಇದೇ ಸಿದ್ದರಾಮಯ್ಯ. ಇವರೇನೂ ನನ್ನನ್ನು ಸಿಎಂ ಮಾಡಿದ್ದಲ್ಲ. ಮೋದಿಯವರು ಎರಡು ಗಂಟೆ ಕೂರಿಸಿ ನನಗೆ ಹಿತವಚನ ಹೇಳಿದ್ದಾರೆ. ಹಾಗಾಗಿ ನಾವು ಪೂರ್ಣ ಮನಸ್ಸಿನಿಂದ ಒಂದಾಗಿದ್ದೇವೆ ಎಂದು ಹೇಳಿದರು.
ಸಮಾವೇಶದಲ್ಲಿ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಮಾಜಿ ಸಿಎಂ ಯಡಿಯೂರಪ್ಪ, ಆರ್.ಅಶೋಕ್, ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಪಾಲ್ಗೊಂಡಿದ್ದರು.
Hd Kumaraswamy slams DK in singular words, asks who is responsible for the death of Cafe coffee day owner Siddharth.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm