ಬ್ರೇಕಿಂಗ್ ನ್ಯೂಸ್
07-07-23 03:25 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 7: ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ನಡುವೆ ಜಟಾಪಟಿ ನಡೆಯುತ್ತಿದ್ದಾಗ ಸ್ಪೀಕರ್ ಯು.ಟಿ.ಖಾದರ್ ತುಳು ಭಾಷೆಯಲ್ಲಿ ಗದರಿದ ಪ್ರಸಂಗ ನಡೆಯಿತು. ಗುರುವಾರ ಸಂಜೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಎಂ.ಬಿ.ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಸ್ಪೀಕರ್ ಕುಳಿತುಕೊಳ್ಳುವಂತೆ ಜೋರು ದನಿಯಲ್ಲಿ ಅಬ್ಬರಿಸಿದ್ದಾರೆ.
ಆದರೆ ಯತ್ನಾಳ್ ಮಾತು ಕೇಳದೇ ಇದ್ದಾಗ ಖಾದರ್ ಹೇಳಿ ಹೇಳಿ ಸಾಕಾಗಿ, ಕೊನೆಗೆ ಹತ್ತಿರದಲ್ಲೇ ಇದ್ದ ಸುನಿಲ್ ಕುಮಾರ್ ಬಳಿ ಖಾದರ್ 'ಆಯಗ್ ಒರ ಪನ್ಲೆಯಾ..' (ಅವರಿಗೊಂದು ಹೇಳಿಯಪ್ಪಾ..) ಎಂದು ಹೇಳಿದ್ದಾರೆ. ತುಳು ಭಾಷೆ ಅರ್ಥವಾಗದ ಯತ್ನಾಳ್ ಇದರಿಂದ ಸಿಡಿಮಿಡಿಗೊಂಡು, ಖಾದರ್ ಸಾಹೇಬ್ರ ಕನ್ನಡ ಅರ್ಥ ಮಾಡಿಸ್ಲಿಕ್ಕೆ ಒಂದು ಏಪ್ ಮಾಡಿಕೊಡಿ ಎಂದು ಕಿಚಾಯಿಸಿದ್ದಾರೆ. ಕನ್ನಡದ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಸ್ಪೀಕರ್ ಖಾದರ್, ಯತ್ನಾಳ್ ಪದೇ ಪದೇ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು. ಆದರೆ ಅದು ನಮ್ಮ ಪ್ರೀತಿಯ ಭಾಷೆ ಎಂದು ಹೇಳಿದರು.
ಈ ಬಗ್ಗೆ ಯತ್ನಾಳ್ ಪ್ರತಿಕ್ರಿಯಿಸಿ, ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ ಹಾಗೂ ಮೈಸೂರು ಕನ್ನಡ ಬೇರೆ, ಹೈದರಾಬಾದ್ ಕನ್ನಡ ಮುಂಬೈ ಕನ್ನಡ ಬೇರೆ. ಮಂಗಳೂರು ಕನ್ನಡ ಸುಂದರ ಭಾಷೆ. ನಮಗೆ ನಿಮ್ಮ ಕನ್ನಡ ಭಾಷೆ ಅರ್ಥ ಆಗಬೇಕು. ಅದಕ್ಕೆ ಆಪ್ ಹಾಕಿಕೊಡಿ. ಅವಾಗ ನಮಗೆ ಅರ್ಥ ಆಗುತ್ತದೆ ಎಂದು ಕಾಲೆಳೆದರು. ಮೊಬೈಲ್ ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದ್ದ ಹಾಗೆ ಅದೇ ರೀತಿಯಲ್ಲಿ ಲೋಕಸಭೆಯಲ್ಲಿ ಹಿಂದಿ ಟು ಕನ್ನಡ ಕನ್ನಡ ಟು ಹಿಂದಿ ಇದ್ದ ಹಾಗೆ ಸ್ಪೀಕರ್ ಟು ಕನ್ನಡ ಮಾಡಿ ಎಂದು ಕಾಲೆಳೆದರು.
Speaker #UTKhader slams Basangouda Patil #Yatnal in #Tulu, #video goes viral pic.twitter.com/2gIri7JoDW
— Headline Karnataka (@hknewsonline) July 7, 2023
Speaker UT Khader slams Basangouda Patil Yatnal in Tulu, video goes viral.
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 05:22 pm
HK News Desk
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm