ಬ್ರೇಕಿಂಗ್ ನ್ಯೂಸ್
05-04-23 02:49 pm Bangalore Correspondent ಕರ್ನಾಟಕ
ಬೆಂಗಳೂರು, ಎ.5: ಬಸವಾರಾಜ ಬೊಮ್ಮಾಯಿ ನನಗೆ ಮಾಮಾ ಇದ್ದಂಗೆ. ಸಣ್ಣ ವಯಸ್ಸಿನಿಂದಲೂ ನನ್ನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದವರು. ನನಗೇನು ಚಿತ್ರರಂಗದಲ್ಲಿ ಯಾರು ಕೂಡ ಗಾಡ್ ಫಾದರ್ ಇರಲಿಲ್ಲ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಬೊಮ್ಮಾಯಿ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ವ್ಯಕ್ತಿತ್ವಕ್ಕೆ ತಲೆಬಾಗುತ್ತೇನೆ, ಅವರ ಪರವಾಗಿ ನಿಲ್ಲುತ್ತೇನೆ. ಹಾಗಂತ, ಪಕ್ಷದ ಪರ ಅಲ್ಲ.
ಇದು ಚಿತ್ರನಟ ಸುದೀಪ್ ಅವರ ಮಾತು. ಬೆಂಗಳೂರಿನ ಅಶೋಕ ಹೊಟೇಲ್ ನಲ್ಲಿ ಸಿಎಂ ಬೊಮ್ಮಾಯಿ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ಸುದೀಪ್ ಪತ್ರಕರ್ತರ ಕುತೂಹಲದ ಪ್ರಶ್ನೆಗಳಿಗೆ ನೇರ ಉತ್ತರವನ್ನೇ ನೀಡಿದರು. ಚುನಾವಣೆಯಲ್ಲಿ ಬೊಮ್ಮಾಯಿ ಎಂಬ ವ್ಯಕ್ತಿಯ ಪರ ನಿಲ್ಲುತ್ತೇನೆ ವಿನಾ ಪಕ್ಷದ ಪರ ಅಲ್ಲ. ಅವರು ಹೇಳಿದ ಕಡೆಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಸುದೀಪ್ ಅವರಿಗೆ ಪತ್ರಕರ್ತರ ಕಡೆಯಿಂದ ಪ್ರಶ್ನೆಗಳ ಸುರಿಮಳೆಯೇ ಬಂತು. ನೀವು ಒಂದು ಪಕ್ಷದ ಪ್ರಚಾರ ಮಾಡಿದಂತೆ ಆಗುವುದಿಲ್ಲವೇ ಎಂದು ಕೇಳಿದ್ದಕ್ಕೆ, ನಾನು ಯಾವುದೇ ಪಕ್ಷದ ಪರ ಇಲ್ಲ. ಪಕ್ಷದ ಪರವಾಗಿ ಇಡೀ ರಾಜ್ಯದಲ್ಲಿ ಪ್ರಚಾರ ಮಾಡೋಕೂ ನನ್ನಿಂದ ಆಗಲ್ಲ. ಬೊಮ್ಮಾಯಿ ಹೇಳಿದ ಜಾಗದಲ್ಲಿ ಕೆಲವು ಕಡೆ ಪ್ರಚಾರಕ್ಕೆ ಬರುತ್ತೇನೆ. ಅದು ನಾನು ಮತ್ತು ಅವರ ನಡುವಿನ ವೈಯಕ್ತಿಕ ಸಂಬಂಧಕ್ಕಷ್ಟೇ ಸೀಮಿತ ಎಂದರು.
ಈ ನಡುವೆ, ಮೈಕ್ ತೆಗೆದುಕೊಂಡ ಸಿಎಂ ಬೊಮ್ಮಾಯಿ, ನಾನು 2-3 ಸಾರಿ ಸುದೀಪ್ ಜೊತೆಗೆ ಮಾತನಾಡಿದ್ದೇನೆ. ನನ್ನ ಪರವಾಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ ಎಂದವರು ಹೇಳಿದ್ದಾರೆ. ನನಗೋಸ್ಕರ ಅಂದರೆ, ನನ್ನ ಪಕ್ಷದ ಪರವಾಗಿ ಪ್ರಚಾರ ಮಾಡಲು ಸುದೀಪ್ ಸಿದ್ಧರಿದ್ದಾರೆ ಎಂದು ಹೇಳಿದರು. ಬೇರೆ ಪಕ್ಷದ ಪರ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನನ್ನ ಕಷ್ಟ ಸುಖಗಳಿಗೆ ಸ್ಪಂದಿಸಿದವರು ಯಾರಾದ್ರೂ ಇದ್ದರೆ, ಬೆಂಬಲ ಕೇಳಿದರೆ ನಾನು ಬೆಂಬಲ ನೀಡುತ್ತೇನೆ ಎಂದರು.
ಯಾವುದೇ ಪಕ್ಷದ ಪರ ನಿಲ್ಲುವುದಿಲ್ಲ
ನೀವು ಪಾಲಿಟಿಕ್ಸ್ ಸೇರುತ್ತೀರಾ ಎಂಬ ಪ್ರಶ್ನೆಗೆ, 27 ವರ್ಷದ ಹಾರ್ಡ್ ವರ್ಕ್ ನಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಹಾಗಂತ ಪಾಲಿಟಿಕ್ಸ್ ಸೇರಲ್ಲ. ಯಾವುದೇ ಪಕ್ಷದ ಪರ ನಿಲ್ಲೋದಿಲ್ಲ. ಇದು ಒಂದು ಸ್ಟಾಂಡ್ ಅಷ್ಟೇ. ಬೊಮ್ಮಾಯಿ ಅವರಿಗೆ ಮಾತ್ರ ನನ್ನ ಬೆಂಬಲ ಎಂದು ಹೇಳಿದರು. ನೀವು ಇದಕ್ಕಾಗಿ ಎಷ್ಟು ಹಣ ಪಡೆಯುತ್ತೀರಾ ಎಂಬ ಪ್ರಶ್ನೆಗೆ, ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಹಣಕ್ಕಾಗಿ ಮಾಡೋದಿದ್ದರೆ ಬೇಕಾದಷ್ಟು ಕೆಲಸ ಇದೆ. ನನಗೆ ಚಿತ್ರರಂಗದಲ್ಲಿಯೇ ಹಣ ಆಗಬೇಕಾದವರು ಬಹಳಷ್ಟು ಮಂದಿ ಇದ್ದಾರೆ ಎಂದು ಮರು ಪ್ರಶ್ನೆ ಹಾಕಿದರು.
ನೀವು ಬೊಮ್ಮಾಯಿ ಪರ ಅಂದರೆ, ಬಿಜೆಪಿ ಐಡಿಯಾಲಜಿ ಒಪ್ಪಿಕೊಳ್ತೀರಿ ಅಂತನಾ ಎಂಬ ಪ್ರಶ್ನೆಗೆ, ನಾನೊಬ್ಬ ಭಾರತೀಯ. ನಿಮ್ಮ ಹಾಗೆ ದೇಶದಲ್ಲಿ ಬಹಳಷ್ಟು ಐಡಿಯಾಲಜಿ ಹೊಂದಿದವರಿದ್ದಾರೆ. ಹಾಗಂತ, ಅವೆಲ್ಲವನ್ನೂ ಒಪ್ಪಿಕೊಳ್ಳೋಕೆ ಆಗಲ್ಲ ಎಂದರು. ನೀವು ಮೋದಿಗೆ ಬೆಂಬಲಿಸ್ತೀರಾ ಎಂಬ ಪ್ರಶ್ನೆಗೆ, ದೇಶಕ್ಕಾಗಿ ಒಳ್ಳೆದು ಮಾಡುವ ಯಾರಿಗೆ ಆದರೂ ಬೆಂಬಲ ಕೊಡುತ್ತೇನೆ. ಮೋದಿಗೂ ಬೆಂಬಲಿಸುತ್ತೇನೆ ಎಂದರು.
“I will just campaign and not contest polls”, Kannada actor Sudeep Sanjeev, also known as Kiccha Sudeep, said on Wednesday. Speaking at a press conference with Karnataka CM Basavaraj Bommai by his side, Sudeep said that he shares a deep personal bond with CM Bommai and will campaign for the BJP out of respect and admiration that he has for the chief minister. Sudeep also said that CM Bommai had helped him out at a personal level several times in his life.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm