ಬ್ರೇಕಿಂಗ್ ನ್ಯೂಸ್
18-03-23 09:14 pm HK News Desk ಕರ್ನಾಟಕ
ಹಾಸನ, ಮಾ.18 : ದಿಢೀರ್ ಎದ್ದ ಸುಂಟರಗಾಳಿಯಿಂದ ರಸ್ತೆ ಬದಿಯ ಜನರು ಹೆದರಿ ಓಡಿದ್ದಲ್ಲದೆ, ಸಣ್ಣ ಪುಟ್ಟ ಗೂಡಂಗಡಿಗಳಲ್ಲಿದ್ದ ವಸ್ತುಗಳು ತರಗೆಲೆಗಳಂತೆ ಹಾರಿ ಹೋದ ಘಟನೆ ಹಾಸನ ಜಿಲ್ಲೆಯ ಅರಕಲಗೂಡಿನ ಕೊಣನೂರು ಗ್ರಾಮದಲ್ಲಿ ನಡೆದಿದೆ.
ಕೊಣನೂರು ಗ್ರಾಮದ ಹಾಸನ -ಮಡಿಕೇರಿ ರಸ್ತೆಯಲ್ಲಿ ಘಟನೆ ನಡೆದಿದ್ದು ಶನಿವಾರ ಸಂಜೆ ವೇಳೆಗೆ ಉಂಟಾದ ಸುಂಟರಗಾಳಿಗೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ರಸ್ತೆ ಬದಿಯ ಗೂಡಂಗಡಿ, ಕ್ಯಾಂಟೀನ್, ಸಣ್ಣ ಪುಟ್ಟ ಅಂಗಡಿಗಳ ತಗಡು ಶೀಟ್ ಹಾರಿ ಹೋಗಿವೆ, ಅಂಗಡಿಗೆ ಹಾಕಿದ್ದ ಟಾರ್ಪಾಲ್ ಹೊದಿಕೆಗಳು ಹಾರಿ ಹೋಗಿ ವಿದ್ಯುತ್ ತಂತಿಗೆ ಸಿಲುಕಿವೆ.




ಗ್ರಾಮದಲ್ಲಿ ಹಲವು ಅಂಗಡಿಗಳಿಗೆ ಹಾನಿಯಾಗಿದ್ದು ರಸ್ತೆ ಬದಿಯ ಕೆಲವು ಅಂಗಡಿಗಳ ಮುಂದೆ ಇಟ್ಟಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಧೂಳು ಮಿಶ್ರಿತ ಗಾಳಿ ರಸ್ತೆಯಲ್ಲಿ ಹೆದ್ದೆರೆಯಂತೆ ಎದ್ದು ಬಂದಿದ್ದು ಜನರು ಓಡಿ ಅವಿತುಕೊಂಡಿದ್ದಾರೆ. ಹಾರಿ ಹೋಗುತ್ತಿದ್ದ ಗೂಡಂಗಡಿಗಳ ಶೀಟ್ಗಳನ್ನು ಹಿಡಿದಿಡಲು ಜನರು ಹರಸಾಹಸ ಪಟ್ಟಿದ್ದಾರೆ.
#Whrilwind in #Hassan #Madikeri highway, video goes viral. This is said to have happened at Konnanuru village in Hassan. #BreakingNews #BigBreaking #hassannews pic.twitter.com/CesZskuM1w
— Headline Karnataka (@hknewsonline) March 18, 2023
Whrilwind in Hassan Madikeri highway, video goes viral. This is said to have happened at Konnanuru village in Hassan.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm