ಬ್ರೇಕಿಂಗ್ ನ್ಯೂಸ್
28-02-23 03:06 pm HK News Desk ಕರ್ನಾಟಕ
ಶಿವಮೊಗ್ಗ, ಫೆ.28 : ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ನಮ್ಮ ರಾಜ್ಯಕ್ಕೆ ಸ್ಯಾಂಕ್ಷನ್ ಆಗಿದೆ. ಅದಕ್ಕಾಗಿ ಶಿವಮೊಗ್ಗ ಜಿಲ್ಲೆಯ ನವುಲೆಯಲ್ಲಿ 8 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ ಇರುವಂತಹ ಕ್ಯಾಂಪಸ್ ರಚಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಸಲದ ಶೈಕ್ಷಣಿಕ ವರ್ಷದಲ್ಲಿ ಕೇಂದ್ರ ಆರಂಭಕ್ಕೆ ರಾಗಿಗುಡ್ಡದಲ್ಲಿ ಕಟ್ಟಡ ನೀಡಲಾಗಿದೆ. ಮಿಲಿಟರಿ ಮತ್ತು ಆಂತರಿಕ ಭದ್ರತಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ಬೋಧನೆ ಇಲ್ಲಿ ಆಗುತ್ತದೆ. ಸೈಬರ್ ಸೇರಿದಂತೆ, ವಿವಿಧ ಕೋರ್ಸುಗಳು ಇಲ್ಲಿ ಬರಲಿದೆ. ಪಿಯುಸಿ ಬಳಿಕದ ಕೋರ್ಸ್ ಇದಾಗಿದ್ದು ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಹೊಸ ದಿಕ್ಕು ತೋರಿಸಲಿದೆ. ಇತ್ತೀಚೆಗೆ ಅಹಮದಾಬಾದ್ ನಲ್ಲಿ ಈ ಯೂನಿವರ್ಸಿಟಿ ಇರುವಲ್ಲಿಗೆ ಭೇಟಿ ಕೊಟ್ಟಿದ್ದೆವು. ಅಹಮದಾಬಾದ್ ಬಿಟ್ಟರೆ, ಶಿವಮೊಗ್ಗದಲ್ಲೇ ಈ ಕೇಂದ್ರ ಆರಂಭವಾಗುತ್ತಿದೆ.
ಕರ್ನಾಟಕ ಪೊಲೀಸ್ ಗೆ ಪ್ರತಿ ವರ್ಷ 5 ಸಾವಿರ ಜನರನ್ನು ತೆಗೆದುಕೊಳ್ಳುತ್ತೇವೆ. ಹೀಗಾಗಿ ಈ ಯೂನಿವರ್ಸಿಟಿ ನಮಗೆ ಉಪಯೋಗಕ್ಕೆ ಬರುತ್ತದೆ. ಇಲ್ಲಿ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ನೇರವಾಗಿ ಪೊಲೀಸ್ ಡ್ಯೂಟಿಗೆ ಹೋಗಬಹುದಾಗಿದೆ. ಎಕ್ಸಾಂ ಬರೆದು ಪೊಲೀಸ್ ಇಲಾಖೆ ಸೇರಿದವರಿಗೆ 8 ತಿಂಗಳ ಕಾಲ ಟ್ರೈನಿಂಗ್ ನೀಡುತ್ತೇವೆ. ಅದರ ಬದಲಾಗಿ ಈ ಕೋರ್ಸ್ ಪರ್ಯಾಯವಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಮುಷ್ಕರ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಲಿದ್ದಾರೆ. ಕಾನೂನು ಸುವ್ಯವಸ್ಥೆ ನೀಡಲು ಇಲಾಖೆ ಸಜ್ಜಾಗಿದೆ. ಸರ್ಕಾರಿ ನೌಕರರು ಕಾನೂನು ಸುವ್ಯವಸ್ಥೆ ಹಾಳು ಮಾಡುವುದಿಲ್ಲ ಎಂದರು.

ಪಿ.ಎಸ್.ಐ. ಮರು ನೇಮಕಾತಿ ಕುರಿತ ಪ್ರಶ್ನೆಗೆ, ಕೋರ್ಟ್ ಆರ್ಡರ್ ನಿರೀಕ್ಷೆ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಿದೆ. ಅದು ಬಂದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ರೌಡಿ ಶೀಟರ್ ಪಟ್ಟಿಯಿಂದ ಅತಿ ಹೆಚ್ಚು ರೌಡಿಗಳನ್ನು ಬಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರನ್ನ ರಾಜಕೀಯವಾಗಿ ರೌಡಿ ಪಟ್ಟಿಗೆ ಸೇರಿಸುತ್ತಾರೆ. ಹಾಗಾಗಿ ಅವರ ಬ್ಯಾಕ್ ಗ್ರೌಂಡ್ ನೋಡಿಕೊಂಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
Raksha University to come up in Shivamogga, allotments to police department made easier.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm