ಬ್ರೇಕಿಂಗ್ ನ್ಯೂಸ್
29-01-23 01:58 pm HK News Desk ಕರ್ನಾಟಕ
ತುಮಕೂರು, ಜ.29 : ಬಿಬಿಸಿ ಗುಜರಾತ್ ಹತ್ಯಾಕಾಂಡದ ಕಿರುಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ, ನರಮೇಧವನ್ನು ಸಮರ್ಥಿಸಿ ವಿಶ್ವ ಹಿಂದು ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುಜರಾತ್ ನರಮೇಧ ಹಿಂದುಗಳ ಪರಾಕ್ರಮ. 59 ಜನ ರಾಮಭಕ್ತ ಕರಸೇವಕರ ಹತ್ಯೆಗೆ ಪ್ರತೀಕಾರ ರೂಪದಲ್ಲಿ ಎರಡು ಸಾವಿರ ಜನರ ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಶರಣ್ ಪಂಪ್ವೆಲ್ ಮಾತು ವೈರಲ್ ಆಗಿದ್ದು ಆಕ್ರೋಶವೂ ವ್ಯಕ್ತವಾಗುತ್ತಿದೆ.
ಗುಜರಾತ್ ಹತ್ಯಾಕಾಂಡ ಹಿಂದುಗಳು ಷಂಡರಲ್ಲ ಎಂಬುದನ್ನು ಜಗತ್ತಿಗೆ ತೋರಿಸಿ ಕೊಡುತ್ತದೆ. ಹಿಂದು ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ ಎಂದು ತುಮಕೂರಿನಲ್ಲಿ ನಡೆದ ಬಜರಂಗದದಳದ ಶೌರ್ಯ ಯಾತ್ರೆಯಲ್ಲಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ.
ಗುಜರಾತ್ ಘಟನೆಯನ್ನು ಒಂದು ಸಲ ನೆನೆಪು ಮಾಡಿಕೊಳ್ಳಿ. ಅಯೋದ್ಯೆ ರಾಮ ಮಂದಿರಕ್ಕಾಗಿ 58 ಜನರು ಕರ ಸೇವೆಗೋಸ್ಕರ ರೈಲಿನಲ್ಲಿ ಬರಬೇಕಾದರೆ, ಆ ರೈಲನ್ನು ಸುಟ್ಟು ಕರಸೇವಕರನ್ನು ಜೀವಂತ ದಹನ ಮಾಡಿದರು. ಅದಕ್ಕೆ ಉತ್ತರವಾಗಿ ಗುಜರಾತ್ ಯಾವ ರೀತಿಯ ಪ್ರತ್ಯುತ್ತರ ಕೊಟ್ಟಿತು ಎಂಬುದನ್ನು ನೆನಪಿಸಿಕೊಳ್ಳಿ.. ಯಾವ ಹಿಂದು ಕೂಡ ಮನೆಯಲ್ಲಿ ಕುಳಿತಿಲ್ಲ. ರಸ್ತೆಗೆ ಇಳಿದ್ರು, ಮನೆ ಮನೆಗೆ ನುಗ್ಗಿ ಹೊಡೆದ್ರು.. ಕರಸೇವಕರ ಹತ್ಯೆ ನಡೆದಿದ್ದು 59 ಆಗಿದ್ದರೆ, ಗುಜರಾತಿನಲ್ಲಿ ನಡೆದ ಹತ್ಯೆಯ ಸಂಖ್ಯೆ ಇನ್ನೂ ಲೆಕ್ಕ ಸಿಕ್ಕಿಲ್ಲ. ಅಂದಾಜು 2 ಸಾವಿರ ಮಂದಿಯ ಹತ್ಯೆಯಾಗಿದೆ. ಇದು ಹಿಂದುಗಳ ಪರಾಕ್ರಮ ಎಂದು ಬಜರಂಗದಳದ ಮುಖಂಡ ಹೇಳಿಕೊಂಡಿದ್ದಾರೆ.
ಕರಾವಳಿಯನ್ನು ಹಿಂದುತ್ವದ ಫ್ಯಾಕ್ಟರಿ ಮಾಡಿದ್ದಾಗಿ ಸಿದ್ದರಾಮಯ್ಯ ಹೇಳಿಕೆಯನ್ನು ಉಲ್ಲೇಖಿಸಿದ ಶರಣ್, ಇನ್ಮುಂದೆ ರಾಜ್ಯದ ಎಲ್ಲಾ ಜಿಲ್ಲೆಗಳೂ ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದು ಸವಾಲು ಹಾಕಿದ್ದಾರೆ. ಅನಿವಾರ್ಯ ಬಂದರೆ ಹೊಡೆದಾಟ ಮಾಡುತ್ತೇವೆ. ನುಗ್ಗಿ ಹೊಡೆಯಲೂ ಸಿದ್ಧರಿದ್ದೇವೆ. ಸಿದ್ದರಾಮಯ್ಯನವರೇ ನೆನಪಿರಲಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಲ್ಲ, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಕೂಡ ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಬಜರಂಗದಳ ಶೌರ್ಯ ಯಾತ್ರೆಯ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದರು.
2002 Gujarat riots shows Hindus are not cowards but daring, VHP Sharan Pumpwell sparks controversy in Tumkuru. The world has witnessed that Hindus are not cowards after the 2002 Gujarat riots. The two-part BBC documentary 'India: The Modi Question' — covering the 2002 Gujarat riots, and PM Modi and BJP's allegedly communal politics — has been denounced by the government as a "propaganda piece" designed to push a discredited narrative. Using emergency powers, the government has had it pulled down in India from social media platforms such as Twitter and YouTube.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm