ಬ್ರೇಕಿಂಗ್ ನ್ಯೂಸ್
19-01-23 11:05 pm HK News Desk ಕರ್ನಾಟಕ
ಯಾದಗಿರಿ, ಜ.19: ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯ ಲೋಕಾರ್ಪಣೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗುತ್ತಿರುವ ಕೆಲಸಗಳು ಶ್ಲಾಘನೀಯ. ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಅವರ ಸಚಿವರನ್ನು ಅಭಿನಂದಿಸುತ್ತೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಮುಂದಿನ 25 ವರ್ಷಗಳ ಕನಸು ಹೊತ್ತು ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ಕಾಲುವೆ ಯೋಜನೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇದು ನಮಗೆಲ್ಲರಿಗೂ ಅಮೃತ ಕಾಲ. ಈ ಅಮೃತ ಕಾಲದಲ್ಲಿ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಿದೆ. ಭಾರತದ ಎಲ್ಲ ನಾಗರಿಕರಿಗೆ, ಕುಟುಂಬಗಳಿಗೆ, ರಾಜ್ಯಗಳು ಅಭಿಯಾನದ ಭಾಗವಾದಾಗ ಮಾತ್ರ ಭಾರತ ವಿಕಸಿತವಾಗಲಿದೆ. ರೈತರು, ಕಾರ್ಮಿಕರು ಮತ್ತು ಎಲ್ಲರ ಬದುಕು ಸುಧಾರಿಸಿದಾಗ ಮಾತ್ರ ಭಾರತ ವಿಕಸಿತವಾಗಲಿದೆ. ಕೃಷಿಯಲ್ಲಿ ಫಸಲು ಚೆನ್ನಾಗಿ ಬರಬೇಕು, ಕೈಗಾರಿಕೆಯಲ್ಲಿ ಉತ್ಪಾದನೆ ಚೆನ್ನಾಗಿ ಆಗಬೇಕು. ಆಗಷ್ಟೇ ಭಾರತ ವಿಕಸಿತವಾಗಲಿದೆ ಎಂದರು.
ವಿಕಾಸವೇ ನಮ್ಮ ಮೂಲಮಂತ್ರ:
ನಾವು ಎಂದಿಗೂ ವೋಟ್ಬ್ಯಾಂಕ್ ರಾಜಕಾರಣ ಮಾಡಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ. ವಿಕಾಸವೊಂದೇ ನಮ್ಮ ಮೂಲಮಂತ್ರ, ವೋಟ್ ಬ್ಯಾಂಕ್. ಯಾದರಿಗಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ. ಆಹಾರ ಉದ್ಯಮಗಳಿಗೆ ಇಲ್ಲಿ ಉತ್ತೇಜನ ಸಿಗುತ್ತಿದೆ. ಭಾರತವು ಅಭಿವೃದ್ಧಿಹೊಂದಲು ರಕ್ಷಣೆ ಮತ್ತು ಆಂತರಿಕ ಭದ್ರತೆಯೊಂದಿಗೆ ಉತ್ತಮ ಆಡಳಿತವೂ ಅತ್ಯಗತ್ಯ. ಡಬಲ್ ಎಂಜಿನ್ ಸರ್ಕಾರವು ಈ ಆಶಯ ಈಡೇರಿಸುತ್ತಿದೆ. ನಾವು ಘೋಷಿಸಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಹಳೆಯ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದೇವೆ. ಕರ್ನಾಟಕದಲ್ಲಿ ಹಲವು ಹೊಸ ಯೋಜನೆಗಳು ನಡೆಯುತ್ತಿವೆ. ನದಿಗಳ ಜೋಡಣೆಯಿಂದ ಬರಪೀಡಿತ ಪ್ರದೇಶಗಳ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದೇವೆ ಎಂದರು.
ಪ್ರತಿಮನೆಗೆ ನೀರು ಸಂಪರ್ಕ ಡಬಲ್ ಎಂಜಿನ್ ಸರ್ಕಾರದ ಕೊಡುಗೆ:
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಜಲ್ಜೀವನ್ ಮಿಷನ್ ಉತ್ತಮ ಉದಾಹರಣೆಯಾಗಿದೆ. ನಾವು ಮೂರೂವರೆ ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಕಾರ್ಯಕ್ರಮ ಆರಂಭಿಸಿದಾಗ 8 ಕೋಟಿ ಮನೆಗಳಲ್ಲಿ 3 ಕೋಟಿ ಮನೆಗಳಿಗೆ ಮಾತ್ರವೇ ನಲ್ಲಿ ಸಂಪರ್ಕ ಇತ್ತು. ಈಗ ದೇಶದಲ್ಲಿ 11 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 8 ಕೋಟಿ ಹೊಸ ಕುಟುಂಬಗಳಿಗೆ ಪೈಪ್ಗಳ ಸಂಪರ್ಕ ಬಂದಿದೆ. ಇದರಲ್ಲಿ ಕರ್ನಾಟಕದ ಲಕ್ಷಾಂತರ ಕುಟುಂಬಗಳು ಸೇರಿವೆ. ಕರ್ನಾಟಕ ಮತ್ತು ದೇಶದ ಎಲ್ಲ ಮನೆಗಳಿಗೂ ನಾವು ನೀರು ಒದಗಿಸುತ್ತೇವೆ. ನಲ್ಲಿಯಿಂದ ನೀರು ಮನೆಗೆ ಬಂದಾಗ ತಾಯಂದಿರು ಮೋದಿಗೆ ಮನಃಪೂರ್ವಕ ಆಶೀರ್ವಾದ ಕೊಡುತ್ತಾರೆ ಎಂದು ಮುಂದಿನ ಸಲವೂ ದೇಶದ ಜನತೆ ತಮಗೆ ಆಶೀರ್ವಾದ ನೀಡಿ 2024ರಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಪಕ್ಷವನ್ನು ಪರೋಕ್ಷವಾಗಿ ಮೋದಿ ಭಾಷಣದಲ್ಲಿ ಕುಟುಕಿದರು.
ಯಾದಗಿರಿಯಲ್ಲಿ ಈಗ ಹಲವು ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಆಹಾರ ಉದ್ಯಮಗಳಿಗೆ ಇಲ್ಲಿ ಉತ್ತೇಜನ ಸಿಗುತ್ತಿದೆ. ಭಾರತವು ಅಭಿವೃದ್ಧಿಹೊಂದಲು ರಕ್ಷಣೆ ಮತ್ತು ಆಂತರಿಕ ಭದ್ರತೆಯೊಂದಿಗೆ ಉತ್ತಮ ಆಡಳಿತವೂ ಅತ್ಯಗತ್ಯ. ಡಬಲ್ ಎಂಜಿನ್ ಸರ್ಕಾರವು ಈ ಆಶಯ ಈಡೇರಿಸುತ್ತಿದೆ. ನಾವು ಘೋಷಿಸಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಹಳೆಯ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದೇವೆ. ಕರ್ನಾಟಕದಲ್ಲಿ ಹಲವು ಹೊಸ ಯೋಜನೆಗಳು ನಡೆಯುತ್ತಿವೆ. ನದಿಗಳ ಜೋಡಣೆಯಿಂದ ಬರಪೀಡಿತ ಪ್ರದೇಶಗಳ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದೇವೆ.
ಯಾದರಿಗಿಯಲ್ಲಿ ಮಕ್ಕಳ ಪೌಷ್ಟಿಕತೆ ವರ್ಧಿಸಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಸೇವೆ ಸಿಗುತ್ತಿದೆ. ಶಿಕ್ಷಣ, ಆರೋಗ್ಯ, ಸಂಪರ್ಕದಲ್ಲಿ ಯಾದಗಿರಿಯು ಇಂದು ಟಾಪ್-10 ಆಕಾಂಕ್ಷಿ ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ಈ ಸಾಧನೆಗಾಗಿ ಯಾದಗಿರಿಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವನ್ನು ಶ್ಲಾಘಿಸುತ್ತೇನೆ.
ಈಗ ದೇಶದಲ್ಲಿ ‘ಪರ್ ಕ್ರಾಪ್, ಮೋರ್ ಕ್ರಾಪ್’ ಹಾಗೂ ‘ಮೈಕ್ರೋ ಇರಿಗೇಶನ್’ (ಪ್ರತಿ ಹನಿಗೆ ಹೆಚ್ಚು ಬೆಳೆ) ಯೋಜನೆಯನ್ನು ಆದ್ಯತೆಯೊಂದಿಗೆ ಜಾರಿಗೊಳಿಸುತ್ತಿದ್ದೇವೆ. ಕರ್ನಾಟಕದಲ್ಲಿಯೂ ಈ ಯೋಜನೆ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ. ಡಬಲ್ ಎಂಜಿನ್ ಸರ್ಕಾರವು ಅಂತರ್ಜಲ ವೃದ್ಧಿಗೂ ಸತತ ಪ್ರಯತ್ನ ಮಾಡುತ್ತಿದೆ. ಕೆರೆ-ಕುಂಟೆಗಳ ಪುನರುಜ್ಜೀವನಕ್ಕೆ ಒತ್ತು ಕೊಡುತ್ತಿದೆ ಎಂದರು.
ಜಲಜೀವನ್ ಮಿಷನ್ನ ಮತ್ತೊಂದು ಮುಖ್ಯ ಉದ್ದೇಶವೆಂದರೆ ಮಕ್ಕಳ ಜೀವ ಉಳಿಸುವುದು. ಶುದ್ಧ ಕುಡಿಯುವ ನೀರು ಪೂರೈಕೆಯಾದರೆ ಲಕ್ಷಾಂತರ ಮಕ್ಕಳ ಜೀವ ಉಳಿಯುತ್ತದೆ. ಮಕ್ಕಳ ಜೀವ ಉಳಿಸುವುದಕ್ಕಿಂತಲೂ ಶ್ರೇಷ್ಠವಾದ ಕೆಲಸ ಯಾವುದಿದೆ ಹೇಳಿ, ಎಲ್ಲ ಮನೆಗಳಿಗೂ ನೀರು ಸಂಪರ್ಕ ಒದಗಿಸುವುದು ಡಬಲ್ ಎಂಜಿನ್ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಡಬಲ್ ಎಂಜಿನ್ ಎಂದರೆ ಡಬಲ್ ವೇಗ, ಡಬಲ್ ಲಾಭ. ಇದರಿಂದ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ.
ಉತ್ತರ ಕರ್ನಾಟಕ ಕೊಡುಗೆ ಸಾಕಷ್ಟು:
ನಾನು ಇಂದು ಯಾದಗಿರಿ ಬಂದು ಕರ್ನಾಟಕಕ್ಕೆ ಮತ್ತೊಂದು ಕೃತಜ್ಞತೆ ಅರ್ಪಿಸುತ್ತೇನೆ. ಇದು ತೊಗರಿಯ ಕಣಜ. ಕಳೆದ ಕೆಲ ವರ್ಷಗಳಲ್ಲಿ ತೊಗರಿಗಾಗಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ದೇಶದ ಆರ್ಥಿಕತೆಯ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಬೆಳವಣಿಗೆ. ಇದಕ್ಕಾಗಿ ನಾನು ಉತ್ತರ ಕರ್ನಾಟಕದ ರೈತರಿಗೆ ಅಭಾರಿಯಾಗಿದ್ದೇನೆ. ತೊಗರಿ ಬೆಳೆಗಾರರಿಗಾಗಿ 7,000 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಿದ್ದೇವೆ. ಖಾದ್ಯತೈಲದಲ್ಲಿಯೂ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ. ಇದರಲ್ಲಿಯೂ ಕರ್ನಾಟಕದ ಕೊಡುಗೆ ಸಾಕಷ್ಟಿದೆ ಎಂದರು.
ದೇಶದ ಎರಡು ದೊಡ್ಡ ಬಂದರು ನಗರಿಗಳ ಸಂಪರ್ಕ ಮುಂದಿನ ದಿನಗಳಲ್ಲಿ ಸುಧಾರಿಸಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಾಗಲಿದೆ. ಪ್ರವಾಸೋದ್ಯಮಕ್ಕೆ ಹೊಸ ಒತ್ತು ಸಿಗಲಿದೆ. ಮೂಲಸೌಕರ್ಯದ ವಿಚಾರದಲ್ಲಿ ಡಬಲ್ ಎಂಜಿನ್ ಸರ್ಕಾರದ ಪರಿಶ್ರಮದಿಂದಾಗಿ ಕರ್ನಾಟಕಕ್ಕೆ ಹೂಡಿಕೆಗಳು ಹರಿದು ಬರುತ್ತಿವೆ. ಉತ್ತರ ಕರ್ನಾಟಕಕ್ಕೂ ಈ ಹೂಡಿಕೆಯ ಲಾಭ ಸಿಕ್ಕೇ ಸಿಗುತ್ತದೆ. ಇನ್ನೊಮ್ಮೆ ಇದೇ ರೀತಿ ನಮಗೆ ಆಶೀರ್ವದಿಸಿ ಎಂದು ಕೋರುತ್ತೇನೆ. ಇಂಥ ಹಲವು ಯೋಜನೆಗಳಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.
ಎಥೆನಾಲ್ ನೀತಿಯಲ್ಲಿ ಶೀಘ್ರ ಜಾರಿಗೊಳಿಸುತ್ತೇವೆ. ಇದನ್ನು ಸಾಧಿಸಲು ಕರ್ನಾಟಕದ ಕಬ್ಬು ಬೆಳೆಗಾರರ ಕೊಡುಗೆ ಅತ್ಯಗತ್ಯ. ನಾವು 2023ನೇ ಇಸವಿಯನ್ನು ಕಿರುಧಾನ್ಯಗಳ ವರ್ಷವಾಗಿ ಘೋಷಿಸಿದ್ದೇವೆ. ರಾಗಿ ಸೇರಿದಂತೆ ಹಲವು ಕಿರುಧಾನ್ಯಗಳನ್ನು ಬೆಳೆಯುವ ಕರ್ನಾಟಕ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಕರ್ನಾಟಕಕ್ಕೆ ಹೆಚ್ಚು ಲಾಭವಾಗಲಿದೆ.
ನಾವು ಹೊಸ ಶಿಕ್ಷಣ ನೀತಿ ಜಾರಿ ಮಾಡಿದೆವು, ಕರ್ನಾಟಕ ಸರ್ಕಾರ ವಿದ್ಯಾನಿಧಿ ಜಾರಿ ಮಾಡಿತು. ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದರೆ ಕರ್ನಾಟಕ ಸರ್ಕಾರವು ಅವೆಲ್ಲವನ್ನೂ ಸಮರ್ಪಕವಾಗಿ ಬಳಸಿಕೊಂಡಿದೆ. ನಾವು ಮುದ್ರಾ ಯೋಜನೆಯಡಿ ಉದ್ಯಮಗಳಿಗೆ ಪ್ರೋತ್ಸಾಹ ಕೊಡುತ್ತೇವೆ. ಕೊವಿಡ್ನಿಂದ ಬಾಧಿತರಾದ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರ ನೆರವಾಗಿದೆ. ವಂಚಿತ ಕುಟುಂಬಗಳಿಗೆ, ಸಣ್ಣ ರೈತರಿಗೆ ಈವರೆಗೆ ಕೃಷಿ ನೀತಿಯಲ್ಲಿ ಆದ್ಯತೆ ಸಿಗುತ್ತಿರಲಿಲ್ಲ. ಆದರೆ ಈಗ ನಾವು ಡ್ರೋಣ್, ನ್ಯಾನೊ ಯೂರಿಯಾದಂಥ ಆಧುನೀಕರಣಕ್ಕೆ ನೆರವಾಗುತ್ತಿದ್ದೇವೆ. ಇದರ ಜೊತೆಜೊತೆಗೆ ಸಹಜ-ಸಾವಯವ ಕೃಷಿಗೂ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
Prime Minister Narendra Modi laid foundation stone and inaugurated several development projects worth over Rs 10,800 crore during his visit to Karnataka’s northern districts of Yadgiri and Kalaburgi on January 19. The Prime Minister greeted the crowd gathered to welcome him in Yadgiri, Karnataka. This is the second visit by the Prime Minister to Karnataka this month.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm