ಬ್ರೇಕಿಂಗ್ ನ್ಯೂಸ್
08-01-23 10:46 pm Bangalore Correspondent ಕರ್ನಾಟಕ
ಬೆಂಗಳೂರು, ಜ.8 : ದಲಿತ ಮಹಿಳೆಯ ಅತ್ಯಾಚಾರ ಮತ್ತು ವಂಚನೆ, ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಹಾಗೂ ರಾಜಕಾರಣಿಗಳಿಗೆ ಹುಡುಗಿಯರ ಪೂರೈಕೆಯಂಥ ಗಂಭೀರ ಆರೋಪ ಎದುರಿಸುತ್ತಿರುವ ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿ ವಾಗ್ದಾಳಿ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೊ ತೆಗೆದವರು ಯಾರು? ಅವರ ಮನೆಯಲ್ಲಿ ಸ್ಯಾಂಟ್ರೋ ರವಿ 15 ಲಕ್ಷದ ನೋಟುಗಳನ್ನು ಎಣಿಕೆ ಮಾಡಿದ್ದರ ಬಗ್ಗೆ ಅವರೇ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಮಾಧ್ಯಮಕ್ಕೆ ಮಾತನಾಡಿದ ಎಚ್‌ಡಿಕೆ, ಯಾವುದೋ ಎಸಿಪಿ ವರ್ಗಾವಣೆಗೆ 75 ಲಕ್ಷ ರೂಪಾಯಿ ವರ್ಗಾವಣೆಯ ಡೀಲ್ ಅದಾಗಿದ್ದು, ಅದಕ್ಕೆ ಸಂಬಂಧಿಸಿ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಟ್ರೋ ರವಿ 15 ಲಕ್ಷ ರೂಪಾಯಿ ತಂದಿಟ್ಟು ಲೆಕ್ಕ ಮಾಡುತ್ತಿದ್ದಾನೆ. ಲೆಕ್ಕ ಮಾಡುತ್ತಿರುವ ಫೋಟೊವನ್ನು ತೆಗೆದವರು ಯಾರು? ಇದನ್ನು ನಾನು ಎಷ್ಟು ಎಂದು ಕೆದಕುತ್ತಾ ಕೂರಲಿ? ನಾನು ನನ್ನ ಪಂಚರತ್ನ ಯಾತ್ರೆ ಬಗ್ಗೆ ಗಮನ ಹರಿಸುತ್ತಿದ್ದೇನೆ. ರಾಜ್ಯದ ಜನತೆ ಮುಂದೆ ಉತ್ತಮ ಆಡಳಿತ ನೀಡಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಇಲ್ಲಿ ಈ ಸಮಸ್ಯೆ ಬಂದಿದ್ದರಿಂದ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ. ಗೃಹ ಸಚಿವರ ಗೃಹದಲ್ಲೇ ಹೀಗೆ ಆಗಿದ್ದರಿಂದ ಅವರೇ ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಜೊತೆ ಸ್ಯಾಂಟ್ರೋ ರವಿ ವರ್ಗಾವಣೆ ವಿಚಾರವನ್ನೇ ಮಾತನಾಡುತ್ತಾ ನಿಂತಿದ್ದಾರೆ. ಹಾಗಾದರೆ ಆ ವಿಡಿಯೊವನ್ನು ನಾನು ಮಾಡಿಸಿದೆನಾ? ನೀವುಗಳೇ ಮಾಡಿಕೊಂಡಿದ್ದೀರಿ, ನೀವೇ ಇವುಗಳ ಪ್ರೋತ್ಸಾಹಕರಾಗಿದ್ದೀರಿ, ಆ ವಿಡಿಯೊಗಳು ಎಲ್ಲ ಕಡೆ ವೈರಲ್ ಆಗಿದೆ ಎಂದು ಹೇಳಿದರು.

ತಡೆಯಾಜ್ಞೆ ತೆರವಾದ್ರೆ ಸಿಡಿ ಹೊರಬೀಳುತ್ತೆ !
ನನ್ನ ಬಳಿ ಇನ್ನೇನಿದೆ ಎಂದು ನನ್ನ ಕೇಳಿದರೆ ನಾನು ಏನು ಹೇಳಲಿ? ನನಗೇನು ಬೇರೆ ಕೆಲಸ ಇಲ್ಲವೇ? ಎಂದು ಪ್ರಶ್ನಿಸಿದ ಎಚ್‌ಡಿಕೆ, ಬೇರೆ ವಿಡಿಯೋಗಳ ಬಗ್ಗೆ ಮಾತನಾಡುತ್ತಾ, ಈಗ ಹಲವು ಸಚಿವರು ತಂದಿರುವ ತಡೆಯಾಜ್ಞೆ ತೆರವುಗೊಂಡರೆ ವಿಡಿಯೋಗಳು ಬಿಡುಗಡೆ ಆಗಬಹುದು. ಬೇರೆಯವರೂ ವಿಡಿಯೊವನ್ನು ಹೊರಗೆ ಬಿಡಬಹುದು. ಯಾರ ಹತ್ತಿರ ಏನಿದೆಯೋ ಯಾರಿಗೆ ಗೊತ್ತು? ಇಂಥ ವಿಷಯ ಇಟ್ಟುಕೊಂಡು ನಾನು ರಾಜಕೀಯ ಮಾಡಲ್ಲ. ಇಂಥ ಕರ್ಮ ನನಗಿಲ್ಲ ಎಂದು ಹೇಳಿದರು.

ಪ್ರಕರಣ ಹಳ್ಳ ಹಿಡಿಸುತ್ತಿದ್ದಾರೆಯೇ ?
ಸ್ಯಾಂಟ್ರೋ ರವಿಯನ್ನು ಹಿಡಿಯುವುದು ಸರ್ಕಾರದ ಕೆಲಸವಾಗಿದೆ. ಎಲ್ಲ ನಾವೇ ಹೇಳುವುದಾದರೆ ಗೃಹ ಸಚಿವರು ಇರುವುದು ಏತಕ್ಕೆ? ದಾಖಲೆ ಇದ್ದರೆ ಕೊಡಲಿ ಎನ್ನುತ್ತಾರೆ? ಸ್ಯಾಂಟ್ರೋ ರವಿಯನ್ನು ಹುಡುಕುತ್ತಿದ್ದೇವೆ ಎನ್ನುತ್ತಾರೆ. ಪ್ರಕರಣವನ್ನು ಹಳ್ಳಹಿಡಿಸಲು ಇದಕ್ಕಿಂತ ಒಳ್ಳೆಯ ಉದಾಹರಣೆ ಇದೆಯಾ? ನನಗೆ ಎಲ್ಲ ವಿಡಿಯೋಗಳು ಸಿಗುತ್ತವೆ ಎಂದು ಅಲವತ್ತುಕೊಂಡರೆ ಹೇಗೆ? ಅವರು ಎಲ್ಲವನ್ನೂ ಹುಡುಕಬೇಕು. ಸಚಿವ ಮುನಿರತ್ನ ಸುಮ್ಮನೆ ಯಾಕೆ ಮಾತನಾಡುತ್ತಾರೆ? ಅವರೇನು ಸ್ಟೇ ತೆಗೆದುಕೊಂಡಿಲ್ಲ. ಅಂದರೆ ಎಸ್‌ಬಿಎಂ ಟೀಮ್‌ನಲ್ಲಿ ಭಿನ್ನಮತ ಇದೆ ಎಂದು ಅರ್ಥವಲ್ಲವೇ? ಅಲ್ಲಿ ಒಬ್ಬರ ತಲೆ ಉರುಳಿಸಲು ಇನ್ನೊಬ್ಬರು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕೆ ವಿಡಿಯೊಗಳನ್ನು ಬಿಡಿ ಎಂದು ನನ್ನನ್ನು ಪ್ರಚೋದನೆ ಮಾಡುತ್ತಿದ್ದಾರೆ. ನಾನು ಹೇಳಿದ್ದು ತಡೆಯಾಜ್ಞೆ ತೆಗೆದುಕೊಂಡವರ ಬಗ್ಗೆ ಮಾತ್ರ. ಮುನಿರತ್ನ ಬಗ್ಗೆ ಏನೂ ಹೇಳಿಲ್ಲ, ಆದರೂ ಅವರು ಬುಟ್ಟಿಗಳ ಬಗ್ಗೆ, ಹಾವುಗಳ ಬಗ್ಗೆ ಮಾತನಾಡುತ್ತಾರೆ. ಇದೇ ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.
ದಲ್ಲಾಳಿಗಳ ಕೈಯಲ್ಲಿ ಸರ್ಕಾರದ ಆಡಳಿತ

ದಲ್ಲಾಳಿಗಳೇ ಸರ್ಕಾರದ ಆಡಳಿತ ನಡೆಸುವ ಸ್ಥಿತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಸೃಷ್ಟಿ ಮಾಡಿಕೊಂಡಿದ್ದಾರೆ. ಕುಮಾರಕೃಪಾ ಹೊಸ ಕಟ್ಟಡದಲ್ಲಿ ಏನೆಲ್ಲ ನಡೆಯಿತು? ತಪ್ಪೇನೂ ಆಗಿಲ್ಲ ಎಂದಾದರೆ ಅಲ್ಲಿ ಉಸ್ತುವಾರಿ ಇದ್ದ ದೇವರಾಜು ಎನ್ನುವ ವ್ಯಕ್ತಿಯನ್ನು ಯಾಕೆ ಎತ್ತಂಗಡಿ ಮಾಡಲಾಯಿತು? ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಎಂಬವರನ್ನು ಏಕೆ ವರ್ಗಾವಣೆ ಮಾಡಲಾಯಿತು? ಬೆಂಕಿ ಇಲ್ಲದೆ ಹೊಗೆ ಬರುತ್ತದೆಯೇ? ಎಂದು ಪ್ರಶ್ನೆ ಮಾಡಿದರು.
Santro Ravi found counting 15 lakhs money at Karnataka Home Minister Araga Jnanendra house, sparks controversy
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm