ಬ್ರೇಕಿಂಗ್ ನ್ಯೂಸ್
05-01-23 04:35 pm Bangalore Correspondent ಕರ್ನಾಟಕ
ಬೆಂಗಳೂರು, ಜ.5 : ಬೆಂಗಳೂರು ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಇಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಮೊದಲು ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ವೀಕ್ಷಿಸಿದ ನಿತಿನ್ ಗಡ್ಕರಿ ಬಳಿಕ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ವೀಕ್ಷಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಇವರೊಂದಿಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಲೋಕೋಪಯಗಿ ಸಚಿವ ಸಿಸಿ ಪಾಟೀಲ್, ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಇತರರು ಇದ್ದರು. ನಿತಿನ್ ಗಡ್ಕರಿಯವರು ಶ್ರೀರಂಗಪಟ್ಟಣದವರೆಗೆ ಹೆಲಿಕಾಪ್ಟರ್ ಮೂಲಕವೇ ವೀಕ್ಷಿಸಿದರು.
ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ರಾಮನಗರ ಜಿಲ್ಲೆಯ ಜೀಗೇನಹಳ್ಳಿ ಹೆದ್ದಾರಿ ಬಳಿ ಇರುವ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಇಳಿಸಲಾಯಿತು. ನಿತಿನ್ ಗಡ್ಕರಿಯವರು ಇರುವ ಹೆಲಿಕಾಪ್ಟರ್ ಹೆದ್ದಾರಿಯೆಲ್ಲಿಯೇ ಇಳಿಯಲಿದೆ ಎಂಬ ಸುದ್ದಿ ಈ ಮೂಲಕ ಸುಳ್ಳಾಗಿದೆ.
ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಇನ್ನು ಕೆಲವೇ ದಿನಗಳಲ್ಲಿ ಅವಳಿ ನಗರಗಳಾಗಲು ಈ ಹೆದ್ದಾರಿ ನೆರವಾಗಲಿದೆ. ಇವೆರಡು ನಗರಗಳ ನಡುವಿನ ಪ್ರಯಾಣದ ಅವಧಿ 90 ನಿಮಿಷಗಳಿಗೆ ತಗ್ಗುವುದರಿಂದ ದಿನನಿತ್ಯ ಮೈಸೂರು-ಬೆಂಗಳೂರು ನಡುವಿನ ಪ್ರಯಾಣ ಸರಾಗವಾಗಲಿದೆ.
ಇಷ್ಟು ಮಾತ್ರವಲ್ಲದೆ, ಎಕ್ಸ್‌ಪ್ರೆಸ್‌ವೇ ಆಸುಪಾಸಿನಲ್ಲಿ ನಗರೀಕರಣ ಮತ್ತು ವಾಣಿಜ್ಯ ಚಟುವಟಿಕೆಗಳೂ ಹೆಚ್ಚಾಗಲಿವೆ. ಇದರಿಂದ ದಕ್ಷಿಣದ ಐದು ಜಿಲ್ಲೆಗಳು ಭಾರೀ ಪ್ರಮಾಣದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯಿದೆ.ನೈಸ್ ಕಂಪನಿಯ ಬೆಂಗಳೂರು- ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ವೈಫಲ್ಯದ ಸ್ಥಳದಲ್ಲಿ ಈ ಕಾರಿಡಾರ್ ಪರ್ಯಾಯವಾಗಿ ನಿರ್ಮಾಣಗೊಂಡಿದೆ.
ತಲಾ 3 ಪಥಗಳನ್ನು ಒಳಗೊಂಡ ಎರಡೂ ಕಡೆಯಿಂದ 6 ಪಥಗಳ ಎಕ್ಸ್‌ಪ್ರೆಸ್ ವೇ ಇರಲಿದೆ. ಎರಡೂ ಬದಿಯಲ್ಲಿ ತಲಾ 2 ಲೇನ್‌ಗಳನ್ನು ಒಳಗೊಂಡ ಸರ್ವಿಸ್ ರಸ್ತೆ ಒಳಗೊಂಡು ಒಟ್ಟು 10 ಪಥಗಳ ಈ ಯೋಜನೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೀಗೆ, ಆರು ಪಥಗಳ ಎಕ್ಸ್‌ಪ್ರೆಸ್‌ವೇ ಮತ್ತು ನಾಲ್ಕು ಸರ್ವೀಸ್ ಲೇನ್‌ಗಳು ಸೇರಿದಂತೆ ದಶಪಥ ರಸ್ತೆ ಇದಾಗಿರಲಿದೆ.
ಒಟ್ಟು 8172 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. 2 ಹಂತಗಳಲ್ಲಿ ಕೈಗೆತ್ತಿಕೊಂಡಿದ್ದ ಯೋಜನೆ ಪೈಕಿ ಬೆಂಗಳೂರು- ನಿಡಘಟ್ಟ (ಮದ್ದೂರು) ವರೆಗೆ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ. ರಾಮನಗರದಿಂದ ಚನ್ನಪಟ್ಟಣದವರೆಗಿನ ಅತೀ ಉದ್ದದ 22.35 ಕಿ.ಮೀ. ಹೆದ್ದಾರಿಯನ್ನು ಇದು ಒಳಗೊಂಡಿದೆ.
ಒಟ್ಟು 118 ಕಿ.ಮೀ ಉದ್ದದ್ದ ಎಕ್ಸ್‌ಪ್ರೆಸ್ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯು 9 ಬೃಹತ್ ಸೇತುವೆ, 44 ಸಣ್ಣ ಸೇತುವೆ, 8.7 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ ಹೊಂದಿದೆ. 4 ರೈಲ್ವೆ ಮೇಲ್ಸೇತುವೆ, 28 ವೆಹಿಕಲ್ ಅಂಡರ್‌ಪಾಸ್, 13 ಪಾದಚಾರಿ ಅಂಡರ್ ಪಾಸ್‍ಗಳನ್ನ ಒಳಗೊಂಡಿದೆ. ಇನ್ನು ಒಂದೆರಡು ತಿಂಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ದೇಶಕ್ಕೆ ಸಮರ್ಪಣೆಗೊಳಿಸಲಿದ್ದಾರೆ.
#MysuruBengaluruExpressway pic.twitter.com/FeV2Bq2jpq
— Pratap Simha (@mepratap) January 5, 2023
Union Minister Nitin Gadkari on Thursday inspected the progress of the Bengaluru-Chennai Expressway, which is a 262 Km 8-Lane layout worth Rs 16,730 Cr, the minister’s office said.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm