ಬ್ರೇಕಿಂಗ್ ನ್ಯೂಸ್
31-12-22 09:28 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.31: ಗುಜರಾತಿನ ಅಮುಲ್ ಜೊತೆಗೆ ಕರ್ನಾಟಕದ ಕೆಎಂಎಫ್, ನಂದಿನಿಯನ್ನು ವಿಲೀನಗೊಳಿಸುವ ಸಚಿವ ಅಮಿತ್ ಷಾ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮನ್ಮುಲ್ ಮೇಗಾ ಡೇರಿಗೆ ಶುಕ್ರವಾರ ಚಾಲನೆ ನೀಡಿದ್ದ ಅಮಿತ್ ಷಾ ಅವರು, ಗುಜರಾತ್ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಮಿತ್ ಷಾ ಪ್ರಸ್ತಾಪಕ್ಕೆ ತೀವ್ರ ವಿರೋಧ ಕೇಳಿಬಂದಿದ್ದು, ಪ್ರಗತಿಪರರು ಜಾಲತಾಣದಲ್ಲಿ ವಿರೋಧಿಸಿ ಬರೆದಿದ್ದಾರೆ. ಅಮುಲ್ ಇಲ್ಲದೆಯೂ ನಂದಿನಿ ಕರ್ನಾಟಕದಲ್ಲಿ ಚೆನ್ನಾಗಿ ನಡೆಯಬಲ್ಲದು. ಅಮುಲ್ ಗೆ ನಂದಿನಿ ಉತ್ತಮ ಪ್ರತಿಸ್ಪರ್ಧಿಯಾಗಬಹುದೇ ಹೊರತು ಅಂಗಸಂಸ್ಥೆಯಾಗುವುದಲ್ಲ ಎಂದು ಪ್ರಗತಿಪರ ಚಿಂತಕ, ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯ ಬರೆದಿದ್ದಾರೆ.
ಕೆಎಂಎಫ್ ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದು, ರಾಜ್ಯಾದ್ಯಂತ ಹಳ್ಳಿಗಳಲ್ಲಿ ಡೈರಿಗಳನ್ನು ಹೊಂದಿದೆ. ಅಮುಲ್ ಅನ್ನು ಇಲ್ಲಿಗೆ ತಂದರೆ ನಂದಿನಿಯ ಸ್ವಾಯತ್ತಗೆ ಧಕ್ಕೆ ಬಿಟ್ಟರೆ ಬೇರೆ ಲಾಭ ಏನಾಗುತ್ತದೆ. ಅಮುಲ್ ಜೊತೆ ವಿಲೀನ ಮಾಡಿದರೆ, ಬ್ಯಾಂಕ್ ಆಫ್ ಬರೋಡಾ ಜೊತೆಗೆ ವಿಜಯಾ ಬ್ಯಾಂಕ್ ವಿಲೀನಗೊಂಡು ನೂರು ವರ್ಷಗಳ ಇತಿಹಾಸ ಅಳಿದಂತೆ ನಂದಿನಿಗೂ ಅದೇ ಗತಿಯಾಗುತ್ತದೆ. ನಂದಿನಿಯ ಆಡಳಿತ ಕನ್ನಡಿಗರ ಕೈತಪ್ಪುತ್ತದೆ ಅಷ್ಟೇ ಎಂದು ಬರಹಗಾರ ವಸಂತ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಖಾರವಾಗಿ ಪ್ರತಿಕ್ರಿಯಿಸಿದ್ದು, ದಯವಿಟ್ಟು ಕೆಎಂಎಫ್- ನಂದಿನಿ ತಂಟೆಗೆ ಬರಬೇಡಿ. ನಂದಿನಿ ಮಾರುಕಟ್ಟೆ, ಡೈರಿಗಳು ರಾಜ್ಯದ ಪ್ರತಿ ಹಳ್ಳಿಗಳಲ್ಲೂ ನೆಲೆ ನಿಂತಿದೆ. ನೀವು ಮೊದಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಡೈರಿಗಳನ್ನು ಸ್ಥಾಪಿಸಿ. ನಂದಿನಿಯನ್ನೂ ರಿಲಯನ್ಸ್, ಅದಾನಿಗೆ ಮಾರಾಟ ಮಾಡುವ ಹುನ್ನಾರವೇ ಎಂದು ಪ್ರಶ್ನೆ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಕೂಡ ಖಾರವಾಗಿ ಟೀಕಿಸಿದ್ದು, ಕರ್ನಾಟಕದ ಬ್ಯಾಂಕುಗಳನ್ನು ನಾಶ ಪಡಿಸಿದ್ದಾಯ್ತು. ಈಗ ಕೆಎಂಎಫ್ ಮೇಲೆ ಕೇಂದ್ರ ಸರಕಾರದ ವಕ್ರ ದೃಷ್ಟಿ ಬಿದ್ದಿದೆ. ಕರ್ನಾಟಕದ ರೈತರ ಪಾಲಿನ ಕಾಮಧೇನು ಆಗಿರುವ ಕೆಎಂಎಫ್ ಅನ್ನು ಮುಳುಗಿಸುವ ಹುನ್ನಾರದ ವಿರುದ್ಧ ಕನ್ನಡಿಗರು ಸಜ್ಜಾಗಬೇಕಿದೆ. ಕನ್ನಡಿಗರ ಅಸ್ಮಿತೆಗಳನ್ನು ಆಪೋಶನ ತೆಗೆದುಕೊಳ್ಳುವುದೇ ಬಿಜೆಪಿ ಅಜೆಂಡಾ ಎಂದು ಟೀಕಿಸಿದೆ.
ಕರ್ನಾಟಕದ ಹಾಲು ಮಹಾಮಂಡಲವನ್ನು ಗುಜರಾತಿನ ಅಮುಲ್ ಜೊತೆ ವಿಲೀನಗೊಳಿಸಲು ಅಮಿತ್ ಷಾ ಪ್ರಸ್ತಾಪ ಮಾಡಿದ್ದಾರೆ. ಕನ್ನಡಿಗರು ಈಗಲೇ ಎಚ್ಚೆತ್ತುಕೊಂಡು ವಿರೋಧ ತೋರದೇ ಇದ್ದರೆ, ನಮ್ಮ ಬ್ಯಾಂಕುಗಳಿಗಾದ ಗತಿಯೇ ನಂದಿನಿಗೂ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಪಿಎಫ್ಐ ಮೇಲಿನ ಕೇಸುಗಳನ್ನು ನಮ್ಮ ಸರ್ಕಾರ ವಾಪಸ್ಸು ತೆಗೆದುಕೊಂಡಿದೆ ಎಂದು ನಾಜಿ ಸರ್ಕಾರದ ಪ್ರೊಪಗಾಂಡ ಸಚಿವ, ಗೋಬೆಲ್ಸ್ನ ಅಪರಾವತಾರವಾದ ಗೃಹಸಚಿವ @AmitShah ಸುಳ್ಳು ಉಗುಳಿಹೋಗಿದ್ದಾರೆ. 1/7
— Siddaramaiah (@siddaramaiah) December 31, 2022
ಸನ್ಮಾನ್ಯ ಗೃಹ ಸಚಿವ @AmitShah ಅವರು ಒಂದೋ ತಮ್ಮ ಸುಳ್ಳು ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವೇ ತಾವು ಹೇಳಿದ್ದು ಸುಳ್ಳು ಎಂದು ಕ್ಷಮೆ ಕೇಳಬೇಕು. 2/7
— Siddaramaiah (@siddaramaiah) December 31, 2022
ರಾಜ್ಯದಲ್ಲಿ @BJP4Karnataka ಪಕ್ಷದ್ದೇ ಸರ್ಕಾರ ಇದೆ. ಯಾವ ಪಿಎಫ್ಐ ಕಾರ್ಯಕರ್ತರ ಮೊಕದ್ದಮೆಗಳನ್ನು ನಮ್ಮ ಸರ್ಕಾರ ವಾಪಾಸ್ ಪಡೆದಿದೆ ಎನ್ನುವುದನ್ನು ಕಡತ ನೋಡಿ ತಿಳಿದುಕೊಳ್ಳಲು @AmitShah ಅವರಿಗೇನು ದಾಡಿ? ಸುಮ್ಮನೆ ಸುಳ್ಳು ಉಗುಳುವುದು ಯಾಕೆ? 3/7
— Siddaramaiah (@siddaramaiah) December 31, 2022
ನಾನು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. @BJP4Karnataka ಸರ್ಕಾರವೇ ನೀಡಿರುವ ಉತ್ತರದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ. 4/7
— Siddaramaiah (@siddaramaiah) December 31, 2022
ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ @BJP4Karnataka ಸರ್ಕಾರವನ್ನು ಕೇಳಿದ್ದೇನೆ. 5/7
— Siddaramaiah (@siddaramaiah) December 31, 2022
ಕಳೆದ 6 ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ @JnanendraAraga ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ನಿರ್ಲಜ್ಜ @BJP4Karnataka ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. 6/7
— Siddaramaiah (@siddaramaiah) December 31, 2022
ಇದೇ @BJP4Karnataka ಎಸ್ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಸದ್ಯದಲ್ಲಿಯೇ ಇವರ ಒಳ ಒಪ್ಪಂದದ ವಿವರಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ. 7/7
— Siddaramaiah (@siddaramaiah) December 31, 2022
Union Home Affairs Minister Amit Shah’s statement in Karnataka’s Mandya on Friday for pushing “cooperation” between the Karnataka Milk Federation (KMF) and the Anand Milk Union Limited (Amul) in Gujarat has not gone down well with the citizens and the Opposition to save the brand ‘Nandini’. Shah inaugurated a mega dairy established by the Mandya District Cooperative Milk Producers Associations Federation at a cost of Rs 260 crore in Gejjalagere of Mandya district. During his address he said, “Amul and KMF together will work together towards ensuring there is a primary dairy in every village of the state.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm