ಬ್ರೇಕಿಂಗ್ ನ್ಯೂಸ್
31-12-22 12:54 pm HK News Desk ಕರ್ನಾಟಕ
ಬೆಂಗಳೂರು, ಡಿ.31 : ಇತ್ತ ಚುನಾವಣೆಗೆ ರಣಕಹಳೆ ಊದಲು ಇಲೆಕ್ಷನ್ ಚಾಣಕ್ಯ ಎಂದೇ ಗುರುತಿಸಲ್ಪಟ್ಟ ಅಮಿತ್ ರಾಜ್ಯಕ್ಕೆ ಬಂದಿದ್ದರೆ, ಅತ್ತ ರಾಜ್ಯದ ಪ್ರಭಾವಿ ನಾಯಕ ಎಂದೇ ಗುರುತಿಸಲ್ಪಟ್ಟ ಬಿಎಸ್ ಯಡಿಯೂರಪ್ಪ ಎಲ್ಲವನ್ನೂ ಬದಿಗಿಟ್ಟು ಸಿಂಗಾಪುರ ಪ್ರವಾಸ ತೆರಳಿರುವುದು ನಾನಾ ರೀತಿಯ ಶಂಕೆ, ಅನುಮಾನಗಳಿಗೆ ಕಾರಣವಾಗಿದೆ. ಮಂಡ್ಯದಲ್ಲಿ ನಡೆದ ಅಮಿತ್ ಷಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನುಪಸ್ಥಿತಿ ಅನೇಕರ ಹುಬ್ಬೇರುವಂತೆ ಮಾಡಿದ್ದಲ್ಲದೆ, ಕೇಂದ್ರ ನಾಯಕರ ಬಗ್ಗೆ ಮುನಿಸಿಕೊಂಡು ವಿದೇಶಕ್ಕೆ ತೆರಳಿದ್ದಾರೆಂದೇ ಹೇಳಲಾಗುತ್ತಿದೆ.
ಇದೇ ವೇಳೆ, ಚುನಾವಣೆ ಕಾಲದಲ್ಲಿ ಈ ರೀತಿಯ ಬೆಳವಣಿಗೆ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿಗೆ ಇಂಬು ನೀಡಿದೆ. ಅಮಿತ್ ಶಾ ಅವರನ್ನು ಬರಮಾಡಿಕೊಳ್ಳಲು ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ ಬಾರದೇ ಇದ್ದುದು ಇವರ ಒಳಗಿನ ಭಿನ್ನಮತ ಹೆಚ್ಚಿರುವುದನ್ನು ಖಚಿತಪಡಿಸಿದೆ. ಆದರೆ, ರಾಜ್ಯ ನಾಯಕರು ಯಡಿಯೂರಪ್ಪ ಅನುಪಸ್ಥಿತಿಯನ್ನು ಸದ್ದು ಆಗದಂತೆ ತೇಪೆ ಹಾಕಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತು ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಯಡಿಯೂರಪ್ಪ ಅವರು ಸಿಂಗಾಪುರದಲ್ಲಿದ್ದು, ಪೂರ್ವ ನಿಗದಿತ ಪ್ರವಾಸದ ಕುರಿತು ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಜನವರಿ 5 ರಂದು ಹಿಂತಿರುಗಲಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಎಸ್ ಪ್ರಾಬಲ್ಯ ಇರುವ ಮಂಡ್ಯದಲ್ಲಿ ಜನರನ್ನು ಆಕರ್ಷಿಸಲು ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಕಳೆದ ಬಾರಿ ಉಪ ಚುನಾವಣೆ ನಡೆದಾಗ, ಪಕ್ಷಕ್ಕೆ ನೆಲೆ ಇಲ್ಲದ ಜಾಗದಲ್ಲಿ ನಾರಾಯಣ ಗೌಡ ಗೆದ್ದಿರುವುದು ಬಿಜೆಪಿಗೆ ಹುಮ್ಮಸ್ಸು ನೀಡಿತ್ತು. ಅದೇ ಲೆಕ್ಕಾಚಾರದಲ್ಲಿ ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಕಡಿಮೆಗೊಳಿಸಲು ಈ ಬಾರಿಯೂ ಅಮಿತ್ ಷಾ ಅವರನ್ನು ಮೊದಲ ಬಾರಿಗೆ ಅಲ್ಲಿಂದಲೇ ಚುನಾವಣಾ ಕಹಳೆ ಮೊಳಗಿಸಲು ಬಳಸಿಕೊಳ್ಳಲಾಗಿದೆ. ಆದರೆ ಇದೇ ಸಭೆಯಲ್ಲಿ ರಾಜ್ಯದ ಪಾಲಿನ ಪ್ರಭಾವಿ ಮುಖಂಡ ಯಡಿಯೂರಪ್ಪ ಕಾಣಿಸಿಕೊಳ್ಳದೆ ದೂರ ನಿಂತಿದ್ದು ಹೈಕಮಾಂಡ್ ನಾಯಕರ ಲೆಕ್ಕಾಚಾರ ಬುಡಮೇಲು ಮಾಡಿದೆ. ಕಳೆದ ವರ್ಷವೂ ಇದೇ ಸಮಯಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದ ವೇಳೆ ಯಡಿಯೂರಪ್ಪ ಅವರು ಕುಟುಂಬ ಸಮೇತ ದುಬೈನಲ್ಲಿ ವಿಹಾರಕ್ಕೆ ತೆರಳಿದ್ದರು.
ಮೊನ್ನೆ ಬೆಳಗಾವಿ ಅಧಿವೇಶನದಲ್ಲಿಯೂ ಯಡಿಯೂರಪ್ಪ ಎಂದಿನಂತೆ ಇರಲಿಲ್ಲ. ಸಾಮಾನ್ಯವಾಗಿ ವಿಧಾನಸಭೆ ಕಲಾಪಗಳ ಬಗ್ಗೆ ಗಂಭೀರವಾಗಿ ಇರುತ್ತಿದ್ದ ಯಡಿಯೂರಪ್ಪ, ಈ ಬಾರಿಯ ಅಧಿವೇಶನದಲ್ಲಿ ಕೇವಲ ಐದು ದಿನ ಮಾತ್ರ ಹಾಜರಾಗಿದ್ದರು. ಅಲ್ಲದೆ, ಯಡಿಯೂರಪ್ಪ ತಂಗಿದ್ದ ಕೆಎಲ್ಇ ಗೆಸ್ಟ್ ಹೌಸ್ ಗೆ ಭೇಟಿ ನೀಡುವ ಶಾಸಕರು ಮತ್ತು ಇತರರ ಸಂಖ್ಯೆಯೂ ಕಡಿಮೆಯಾಗಿತ್ತು. ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮತ್ತು ಇತರ ಆಪ್ತರನ್ನು ಸೇರಿ ಕೆಲವೇ ಮಂದಿ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಸೈಡ್ ಲೈನ್ ಆಗುತ್ತಿರುವ ಯಡಿಯೂರಪ್ಪ ಮಂಡ್ಯದ ಸಂಕಲ್ಪ ಸಮಾವೇಶದಿಂದ ದೂರ ನಿಂತಿರುವುದು ಹಲವು ಅರ್ಥಗಳನ್ನು ಕಲ್ಪಿಸಿದೆ.
ಇದರ ನಡುವಲ್ಲೇ ಅಮಿತ್ ಷಾ ಶುಕ್ರವಾರ ರಾತ್ರಿ ರಾಜ್ಯ ನಾಯಕರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ಅವರಿಗೆ ಮತ್ತೆ ಸಚಿವ ಸ್ಥಾನ ಕಲ್ಪಿಸುವ ವಿಚಾರ ಸೇರಿದಂತೆ ಚುನಾವಣೆಗೆ ತಯಾರಿ, ಯಡಿಯೂರಪ್ಪ ಮುನಿಸು ಇನ್ನಿತರ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಮುನಿಸಿಕೊಂಡರೆ, ರಾಜ್ಯ ಬಿಜೆಪಿಗೆ ಉಳಿಗಾಲ ಇಲ್ಲ ಎನ್ನುವುದು ರಾಜ್ಯ ನಾಯಕರಿಗೆ ತಿಳಿದಿದ್ದರೂ, ಅವರನ್ನು ಬೇಕೆಂದೇ ಗೌಣವಾಗಿಸುವ ಕೆಲಸಗಳು ನಡೆಯುತ್ತಿರುವುದು ಚುನಾವಣೆ ಕಾಲದಲ್ಲಿ ಪಕ್ಷದೊಳಗೆ ಒಡಕು ಧ್ವನಿ ಏಳಲು ಕಾರಣವಾಗಲಿದೆ. ಪ್ರಮುಖವಾಗಿ ಯಡಿಯೂರಪ್ಪ ಅವರನ್ನು ನಂಬಿ ಕಾಂಗ್ರೆಸ್, ಜೆಡಿಎಸ್ ನಿಂದ ಬಂದಿದ್ದ ಶಾಸಕರು ಮುನಿಸಿಕೊಂಡಿದ್ದು ಸೂಕ್ತ ಸ್ಥಾನ ಸಿಗದೇ ಇದ್ದವರು ಮತ್ತೆ ಮಾತೃ ಪಕ್ಷಕ್ಕೆ ಮರಳುವುದು ಖಚಿತವಾಗಿದೆ. ಈ ಬಗ್ಗೆ ಕೆಲವು ಶಾಸಕರು ಈಗಾಗಲೇ ಬಹಿರಂಗ ಹೇಳಿಕೆಯನ್ನೂ ನೀಡಿದ್ದಾರೆ.
ಆದರೆ, ಇಂಥ ಬೆಳವಣಿಗೆಯ ನಡುವಲ್ಲೇ ಪಕ್ಷದ ಮೇಲೆ ಹತೋಟಿ ಸಾಧಿಸಲು ಬಿ.ಎಲ್ ಸಂತೋಷ್ ರಾಜ್ಯ ತಿರುಗಾಟ ಆರಂಭಿಸಿದ್ದಾರೆ. ಪಕ್ಷ ಯಾರನ್ನು ಕಣಕ್ಕಿಳಿಸುತ್ತೋ ಅವರ ಪರವಾಗಿ ಕೆಲಸ ಮಾಡಬೇಕು, ಆಗದವರು ಪಕ್ಷ ಬಿಟ್ಟು ಹೋಗಬಹುದು ಎಂದು ಕಲಬುರ್ಗಿಯಲ್ಲಿ ಸಂತೋಷ್ ಕಾರ್ಯಕರ್ತರ ಬಿಸಿ ಮುಟ್ಟಿಸಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಇತ್ತ ತಾನು ಒಬ್ಬಂಟಿಯಾಗುತ್ತಿದ್ದೇನೆ ಎಂಬ ಭಾವ ಮೂಡಿರುವ ಯಡಿಯೂರಪ್ಪ ಸದ್ದಿಲ್ಲದೆ, ಚುನಾವಣೆ ಕಾಲದಲ್ಲಿ ಪಾಠ ಕಲಿಸಲು ಮುಂದಾಗಿದ್ದಾರೋ ಎನ್ನುವ ಮಾತು ಕೇಳಿಬರುತ್ತಿದೆ. ಮಂಡ್ಯದ ಅಮಿತ್ ಷಾ ಸಭೆಯಿಂದ ದೂರ ನಿಂತು ವಿದೇಶ ಪ್ರವಾಸ ಕೈಗೊಂಡಿದ್ದು ಯಡಿಯೂರಪ್ಪ ಅವರ ರಾಜಕೀಯ ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ, ಸಿಎಂ ಬೊಮ್ಮಾಯಿ ಕೂಡ ತನ್ನಿಂದ ಅಂತರ ಕಾಯ್ದುಕೊಂಡಿರುವುದು ಯಡಿಯೂರಪ್ಪ ಅಸಹನೆಗೆ ಕಾರಣವಾಗಿದೆ.
There was one important absentee at Union Home Minister Amit Shah’s function in Mandya -- former chief minister BS Yediyurappa, who incidentally hails from Bookanakere in Mandya. His absence has raised many eyebrows and led to talk of everything being fine between Yediyurappa and his successor Basavaraj Bommai. The fact that Yediyurappa was not present at the airport on Thursday night to receive Shah, and later on Friday in Mandya, has led to speculation of differences between the two leaders.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm