ಬ್ರೇಕಿಂಗ್ ನ್ಯೂಸ್
12-09-22 06:20 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.12: ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಅಧಿಕೃತ ಬಲ ಸಿಗುತ್ತಿದ್ದಂತೆ ಅಧಿಕಾರಿಗಳು ಮೈಕೊಡವಿಕೊಂಡಿದ್ದಾರೆ. ಬಿಬಿಎಂಪಿ ಪಶ್ಚಿಮ ವಿಭಾಗದಲ್ಲಿ ಜಂಟಿ ಆಯುಕ್ತ ಎಸ್.ಎಂ.ಶ್ರೀನಿವಾಸ್ ಮೇಲೆ ಲೋಕಾಯುಕ್ತ ರೈಡ್ ಮಾಡಿದ್ದು, ನಾಲ್ಕು ಲಕ್ಷ ಲಂಚದ ಹಣ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಲೋಕಾಯುಕ್ತ ಪೂರ್ತಿ ನಿಷ್ಕ್ರಿಯವಾಗಿತ್ತು. ಅದರ ಬದಲಿಗೆ ಎಸಿಬಿ ರಚಿಸಿದ್ದರಿಂದ ಲೋಕಾಯುಕ್ತ ಅನ್ನೋ ಸಂಸ್ಥೆ ಇದೆಯೋ ಇಲ್ಲವೋ ಅನ್ನುವ ಸಂಶಯ ಹುಟ್ಟಿತ್ತು. ಎಸಿಬಿ ಅಧಿಕಾರಿಗಳು ನಾಮಕೇವಾಸ್ತೆ ದಾಳಿ ನಡೆಸುತ್ತಿದ್ದರೂ, ಅದಕ್ಕೂ ಪೂರ್ಣ ಅಧಿಕಾರ ಇಲ್ಲದೇ ಇದ್ದುದರಿಂದ ಭ್ರಷ್ಟ ಕುಳಗಳು ಪಾರಾಗಿ ಬರುತ್ತಿದ್ದವು. ಆದರೆ, ಮೊನ್ನೆಯಷ್ಟೇ ರಾಜ್ಯ ಸರಕಾರ ರಚಿಸಿದ್ದ ಎಸಿಬಿಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ಮಾಡಿತ್ತು. ಅಷ್ಟೇ ಅಲ್ಲ, ಲೋಕಾಯುಕ್ತಕ್ಕೆ ಮತ್ತೆ ಹಿಂದಿನ ಖದರ್ ಕೊಟ್ಟು ಆದೇಶ ಮಾಡಿದ್ದು ಎರಡು ದಿನಗಳ ಹಿಂದೆಯಷ್ಟೇ ರಾಜ್ಯ ಸರಕಾರದ ಮೂಲಕ ಅಧಿಕೃತ ಆಗಿತ್ತು.
ಅಧಿಕೃತ ಆದೇಶ ಆದ ಎರಡೇ ದಿನದಲ್ಲಿ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಎಎಸ್ ಅಧಿಕಾರಿ ಎಸ್.ಎಂ. ಶ್ರೀನಿವಾಸ್ ಹಾಗೂ ಅವರ ಆಪ್ತ ಸಹಾಯಕ ಉಮೇಶ್ ಅವರನ್ನು ಬಂಧಿಸಿದ್ದಾರೆ. ಸ್ಥಿರಾಸ್ತಿಯೊಂದರ ಖಾತೆ ಬದಲಾವಣೆಗೆ ಮಂಜುನಾಥ್ ಎಂಬವರಿಂದ ನಾಲ್ಕು ಲಕ್ಷ ರೂ. ಲಂಚ ಕೇಳಿದ್ದರು. ಈ ಬಗ್ಗೆ ಬೆಂಗಳೂರು ವಿಭಾಗದ ಲೋಕಾಯುಕ್ತಕ್ಕೆ ಮಂಜುನಾಥ್ ದೂರು ನೀಡಿದ್ದರು. ಅಧಿಕಾರಿಗಳ ಸೂಚನೆಯಂತೆ ಇಂದು ಮಧ್ಯಾಹ್ನ ಮಂತ್ರಿಮಾಲ್ ಎದುರಿನ ಬಿಬಿಎಂಪಿ ಪಶ್ಚಿಮ ವಲಯದ ಕಚೇರಿಯಲ್ಲಿ ನಾಲ್ಕು ಲಕ್ಷ ಲಂಚದ ಹಣವನ್ನು ನೀಡುತ್ತಿದ್ದಾಗಲೇ ಲೋಕಾಯುಕ್ತ ದಾಳಿ ನಡೆಸಿದ್ದು, ಭ್ರಷ್ಟ ಮಿಕವನ್ನು ಬಲೆಗೆ ಕೆಡವಿದೆ.
ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿಗಳಾದ ಬಿಕೆ ಮಂಜಯ್ಯ ಹಾಗೂ ಎಂಜಿ ಶಂಕರನಾರಾಯಣ ನೇತೃತ್ವದ ತಂಡ ದಾಳಿ ನಡೆಸಿದ್ದು, ಇಬ್ಬರನ್ನೂ ಬಂಧಿಸಿದೆ. ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಹಲವು ಸಮಯಗಳಿಂದ ಝಂಡಾ ಊರಿದ್ದು, ಆಸ್ತಿ ವರ್ಗಾವಣೆ, ಪಹಣಿ ಪತ್ರ ಸೇರಿದಂತೆ ಪ್ರತಿ ಕೆಲಸಕ್ಕೂ ಕೈಚಾಚುತ್ತಿದ್ದ ಎನ್ನುವ ಆರೋಪಗಳಿದ್ದವು. ಅಲ್ಲದೆ, ಬಿಲ್ಡರುಗಳ ಜೊತೆ ಸೇರಿಕೊಂಡು ಕೋಟ್ಯಂತರ ಆಸ್ತಿ ಮಾಡಿದ್ದಾರೆಂಬ ಆರೋಪವೂ ಇತ್ತು.
Bangalore Lokayukta makes it's first Raid after coming back to power, BBMP joint commissioner arrested.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm