ಬ್ರೇಕಿಂಗ್ ನ್ಯೂಸ್
13-11-25 10:09 pm Mangalore Correspondent ಕ್ರೈಂ
ಮಂಗಳೂರು, ನ.13 : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಂಗಳೂರಿನಲ್ಲಿ ಮತ್ತೊಬ್ಬ ಹಿರಿಯ ಮಹಿಳೆ ಹಣ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ಮಹಿಳೆಯೊಬ್ಬರು ಪಕ್ಕದ ಮನೆಯ ಮಹಿಳೆಯಿಂದಾಗಿ ಡಿಜಿಟಲ್ ಅರೆಸ್ಟ್ ನಿಂದ ಹಣ ಕಳೆದುಕೊಳ್ಳುವದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದರು. ಇದೀಗ ಮತ್ತೊಬ್ಬ ಹಿರಿಯ ಮಹಿಳೆ ಡಿಜಿಟಲ್ ಅರೆಸ್ಟ್ ನಲ್ಲಿ ಬರೋಬ್ಬರಿ 1.81 ಕೋಟಿ ಹಣ ಕಳಕೊಂಡಿದ್ದಾರೆ.
ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 58 ವರ್ಷದ ಮಹಿಳೆಯೊಬ್ಬರಿಗೆ ಅ.24 ರಂದು ಅವರ ಮೊಬೈಲಿಗೆ ಅಪರಿಚಿತ ವ್ಯಕ್ತಿ (ಮೊಬೈಲ್ ನಂಬ್ರ- 9381017412) ಕರೆ ಮಾಡಿ ಮುಂಬೈ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿ ಮನಿ ಲಾಂಡರಿಂಗ್ ಕೇಸ್ ಹಾಗೂ ಹ್ಯುಮನ್ ಟ್ರಾಫಿಕಿಂಗ್ ಕೇಸ್ ನಲ್ಲಿ ಕಮಿಷನ್ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ನೀವು ಸಸ್ಪೆಕ್ಟ್ ಇದ್ದೀರಿ, ತನಿಖೆಯ ಬಗ್ಗೆ ನೀವು ವಿಡಿಯೋ ಕಾಲ್ ನಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಇದರಿಂದ ಭಯಗೊಂಡ ಮಹಿಳೆ ವಿಡಿಯೋ ಕಾಲ್ ನಲ್ಲಿದ್ದು ಲೆಟರ್ ಬರೆಯಿಸಿಕೊಂಡು ಅದನ್ನು ವಾಟ್ಸಪ್ ಕಳುಹಿಸಲು ತಿಳಿಸಿದ್ದಾರೆ. ನಂತರ ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿ ವಾಟ್ಸ್ ಆಪ್ ವಿಡಿಯೋ ಕರೆ ಮಾಡಿ ಮಹಿಳೆಯ ವೈಯಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ವಿವರಗಳ ಬಗ್ಗೆ ವಿಚಾರಿಸಿರುತ್ತಾರೆ. ಮರು ದಿನ ಪಿರ್ಯಾದಿದಾರರಿಗೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಹಣ ಪಾವತಿಸುವಂತೆ ಹಾಗೂ ಪಡೆದುಕೊಂಡ ಎಲ್ಲಾ ಹಣವನ್ನು ವಾಪಾಸು ನೀಡುವಂತೆ ತಿಳಿಸಿರುತ್ತಾರೆ.
ವಿಷಯಯನ್ನು ಯಾರಿಗೂ ತಿಳಿಸಬಾರದೆಂದು ಹೇಳಿ ಪಿರ್ಯಾದಿದಾರರಿಗೆ ಭಯ ಹುಟ್ಟಿಸಿ ಬೆದರಿಕೆ ಹಾಕಿರುತ್ತಾರೆ. ಬಳಿಕ ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ದಿನಾಂಕ: 28-10-2025 ರಿಂದ 11-11-2025 ರವರೆಗೆ ಹಂತ ಹಂತವಾಗಿ ಒಟ್ಟು 1,81,50,000/- ರೂ.ಗಳನ್ನು RTGS ಮೂಲಕ ವರ್ಗಾವಣೆ ಮಾಡಿರುತ್ತಾರೆ. ಹಣ ನೀಡಿದ ಬಳಿಕ ಆರೋಪಿಗಳು ಸಂಪರ್ಕ ಕಡಿತಗೊಳಿಸಿದ್ದು ಮಹಿಳೆಗೆ ಮೋಸದ ಅರಿವಾಗಿ ಪೊಲೀಸ್ ದೂರು ನೀಡಿದ್ದಾರೆ. ಮಂಗಳೂರಿನಲ್ಲಿ ಹಿರಿಯ ನಾಗರಿಕರನ್ನು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಯಾಮಾರಿಸುವುದು ಹೆಚ್ಚುತ್ತಿದ್ದು ಪೊಲೀಸರು ಕೂಡ ಅಸಹಾಯಕತೆ ತೋರಿದ್ದಾರೆ.
The digital arrest scam continues to haunt Mangaluru, with yet another senior woman falling victim — losing a staggering ₹1.81 crore to cybercriminals posing as Mumbai police officials. Just recently, another elderly woman narrowly escaped losing her money in a similar scam. However, this latest case marks one of the biggest losses reported under this fraud in the region.
16-03-26 03:36 pm
HK News Staffer
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
16-03-26 02:44 pm
HK News Staffer
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾಕ್ಕೆ ;...
15-03-26 05:37 pm
ಎಪ್ರಿಲ್ 9 ಮತ್ತು 23 ; ಕೇರಳ, ತಮಿಳುನಾಡಿನಲ್ಲಿ ಒಂದ...
15-03-26 05:08 pm
16-03-26 02:46 pm
HK News Staffer
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am