ಬ್ರೇಕಿಂಗ್ ನ್ಯೂಸ್
12-11-24 07:02 pm Mangalore Correspondent ಕ್ರೈಂ
ಮಂಗಳೂರು, ನ.12: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮುಲ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮನೆಯ ಒಳಗಡೆ ಪೊಲೀಸರು ತಪಾಸಣೆ ನಡೆಸಿದ್ದು, ಕಾರ್ತಿಕ್ ಭಟ್ ಮತ್ತು ಪತ್ನಿ ಪ್ರಿಯಾಂಕಳ ಎರಡು ಮೊಬೈಲ್ ಹಾಗೂ ಎರಡು ಚೂರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಮನೆಯನ್ನು ಸೀಜ್ ಮಾಡಿದ್ದು, 2-3 ದಿನ ಯಾರು ಕೂಡ ವಾಸ ಇರಬಾರದು ಎಂದು ಸೂಚನೆ ನೀಡಿದ್ದಾರೆ.
ಒಂದೇ ಮನೆಯ ಬೇರೆ ಬೇರೆ ಕೋಣೆಯಲ್ಲಿ ಕಾರ್ತಿಕ್ ಭಟ್ ದಂಪತಿ ಮತ್ತು ಕಾರ್ತಿಕ್ ತಂದೆ ಜನಾರ್ದನ ಭಟ್ ದಂಪತಿ ವಾಸವಿದ್ದರು. ಜನಾರ್ದನ ಭಟ್ ಬೆಳಗ್ಗೆದ್ದು ನೇರವಾಗಿ ಹೊಟೇಲಿಗೆ ಹೋಗುತ್ತಿದ್ದರೆ, ಕಾರ್ತಿಕ್ ಮತ್ತು ಪತ್ನಿ, ಮಗು ಹೊರಗಡೆ ಹೋಗಿಯೇ ಊಟ, ತಿಂಡಿ ಮಾಡುತ್ತಿದ್ದರು. ಇದಲ್ಲದೆ, ಮನೆಯೊಳಗಿನ ಕೋಣೆಯಲ್ಲಿ ನೇತು ಹಾಕಿದ್ದ ಫೋಟೋಗೆ ಮಸಿ ಬಳಿಯಲಾಗಿದೆ. ಕಾರ್ತಿಕ್, ಪತ್ನಿ ಪ್ರಿಯಾಂಕ ಮತ್ತು ಮಗು ಇದ್ದ ಫೋಟೋವನ್ನು ಸ್ವತಃ ಕಾರ್ತಿಕ್ ಸಾಯಲು ಹೋಗುವುದಕ್ಕೂ ಮುನ್ನ ಮಸಿ ಬಳಿದಿದ್ದನೇ ಎಂಬ ಶಂಕೆ ಮೂಡಿದೆ.
ತನಿಖೆ ಸಂದರ್ಭದಲ್ಲಿ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದು, ಶುಕ್ರವಾರ ಕೊಲೆ ಕೃತ್ಯದ ಬಳಿಕ ಕಾರ್ತಿಕ್ ಭಟ್ ತನ್ನ ದ್ವಿಚಕ್ರ ವಾಹನವನ್ನು ಮುಲ್ಕಿ ಬಳಿಯ ಕಲ್ಲಾಪು ದೇವಸ್ಥಾನದ ಬಳಿ ಇಟ್ಟು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ರೈಲು ಹಳಿಯ ಮೇಲೆ ಕೈಗೆ ಬಟ್ಟೆ ಸುತ್ತಿಕೊಂಡು ಹೋಗುವ ದೃಶ್ಯವೂ ಸೆರೆಯಾಗಿದ್ದು ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದ್ದು ಏನಿದೆ ಎನ್ನುವುದು ಗೊತ್ತಾಗಿಲ್ಲ.
ತಲೆತಿರುಗಿ ಆಸ್ಪತ್ರೆ ಸೇರಿದ ತಾಯಿ, ಮಗಳು !
ಈ ನಡುವೆ, ಪ್ರಿಯಾಂಕ ತಾಯಿ ನೀಡಿದ ದೂರಿನಂತೆ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ. ಸೋಮವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಲ್ಲಿಂದ ಜೈಲಿನತ್ತ ಕರೆದೊಯ್ಯುತ್ತಿದ್ದಾಗಲೇ ಶ್ಯಾಮಲಾ ಮತ್ತು ಕಣ್ಮಣಿ ತಲೆತಿರುಗಿದ ರೀತಿ ನೆಲಕ್ಕೆ ಬಿದ್ದಿದ್ದು, ಅಸ್ವಸ್ಥರಾದ ರೀತಿ ನಟಿಸಿದ್ದಾರೆ. ಹೀಗಾಗಿ ಆರೋಪಿಗಳಿಬ್ಬರನ್ನೂ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶೋಕಿ ಜೀವನವೇ ಮುಳುವಾಯಿತೇ?
ಸ್ಥಳೀಯರ ಪ್ರಕಾರ, ಮನೆಯಲ್ಲಿ ತಂದೆ- ತಾಯಿ ಜೊತೆಗೆ ಮಾತು ಬಿಟ್ಟಿದ್ದ ಕಾರ್ತಿಕ್ ಭಟ್ ಸ್ನೇಹಿತರ ಬಳಿ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಆದರೂ, ಶೋಕಿ ಜೀವನ ಮಾಡುತ್ತಿದ್ದ. ದಿನವೂ ಪತ್ನಿ, ಮಗುವಿನ ಜೊತೆಗೆ ಹೊಟೇಲಿಗೆ ತೆರಳಿ ಊಟ, ತಿಂಡಿ ಮಾಡುತ್ತಿದ್ದ. ಸರಿಯಾದ ಕೆಲಸ ಇಲ್ಲದ ಕಾರಣ ಮನೆಯಲ್ಲಿ ತಂದೆ, ತಾಯಿ ಜೊತೆಗೂ ಮಾತು ಬಿಟ್ಟಿದ್ದರಿಂದ ಖರ್ಚಿಗಾಗಿ ಸಾಲ ಮಾಡಿಕೊಂಡಿದ್ದ. ಆದರೂ ಮೊನ್ನೆ ದೀಪಾವಳಿಗೆ ಪತ್ನಿ, ಮಕ್ಕಳ ಜೊತೆಗೆ ಫ್ಲಾಟ್ ಕೆಳಗೆ ಬಂದು ಪಟಾಕಿ ಸಿಡಿಸಿ ಸಂಭ್ರಮಿಸಿದ್ದ. ಇದೇ ವೇಳೆ, ಪತ್ನಿ ಜೊತೆಗೂ ಜಗಳ ಮಾಡಿಕೊಂಡು ಹಣದ ಚಿಂತೆಯ ನಡುವೆ ಅವರು ಮಲಗಿದ್ದಾಗಲೇ ಚೂರಿಯಿಂದ ತಿವಿದು ಕೊಂದಿದ್ದನೇ ಎನ್ನುವ ಶಂಕೆಯಿದೆ.
Mangalore Mulki murde case, both mother and sister of karthik bhat arrested, admitted to hospital. The house of karthik bhat has been seized, two three knifes also have been seized by the police team.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm