ಎಸ್ಸೆಸ್ಸೆಲ್ಸಿ ಫಲಿತಾಂಶ ; ದಕ್ಷಿಣ ಕನ್ನಡ ಜಿಲ್ಲೆಯ 17 ಮಂದಿಗೆ 625 ಅಂಕದ ಸಾಧನೆ, ಆಳ್ವಾಸ್ ಕನ್ನಡ ಶಾಲೆಯ ಐವರಿಗೆ ಪೂರ್ಣ ಅಂಕ ! 

19-05-22 06:52 pm       Mangalore Correspondent   ಕರಾವಳಿ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ವಿಶೇಷ ದಾಖಲೆ ಮಾಡಿದ್ದಾರೆ. ಈ ಬಾರಿ ಜಿಲ್ಲೆಯ 17 ಮಂದಿ ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. 

 ಮಂಗಳೂರು, ಮೇ 19 : ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ವಿಶೇಷ ದಾಖಲೆ ಮಾಡಿದ್ದಾರೆ. ಈ ಬಾರಿ ಜಿಲ್ಲೆಯ 17 ಮಂದಿ ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. 

ಮೂಡುಬಿದ್ರೆಯ ಆಳ್ವಾಸ್ ಕನ್ನಡ ಮೀಡಿಯಂ ಪ್ರೌಢಶಾಲೆಯ ಐವರು 625 ಅಂಕದ ಸಾಧನೆ ಮಾಡಿದ್ದಾರೆ. ಇಂದಿರಾ ಅರುಣ್ ನ್ಯಾಮಗೌಡರ್, ಶ್ರೇಯಾ ಆರ್. ಶೆಟ್ಟಿ, ಸುದೇಶ್ ದತ್ತಾತ್ರೇಯ ಕಿಲ್ಲೇದಾರ್, ಈರಯ್ಯ ಶ್ರೀಶೈಲ, ಕಲ್ಮೇಶ್ವರ್ ಪುಂಡಲೀಕ ನಾಯ್ಕ್ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಪೂರ್ಣ ಅಂಕದ ಸಾಧನೆ ಮಾಡಿದ್ದಾರೆ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಸ್ವಸ್ತಿ ಮತ್ತು ಶ್ರೀಜಾ ಹೆಬ್ಬಾರ್ ಕೂಡ ಈ ಸಾಧನೆ ಮಾಡಿದ್ದಾರೆ. 

ಉಳಿದಂತೆ ವಿಟ್ಲದ ಅಳಿಕೆ ಸತ್ಯಸಾಯಿ ಲೋಕಸೇವಾ ಇಂಗ್ಲಿಷ್ ಮೀಡಿಯಂ ಶಾಲೆಯ ಸುಜಯಾ ಬಿ., ವಿಟ್ಲ ಜೇಸಿ ಶಾಲೆಯ ಧನ್ಯಶ್ರೀ, ಬೆಳ್ತಂಗಡಿಯ ಸರಕಾರಿ ಮೊರಾರ್ಜಿ ಇಂಗ್ಲಿಷ್ ಶಾಲೆಯ ರೋಶನ್, ಬೆಳ್ತಂಗಡಿ ಸೈಂಟ್ ಮೇರೀಸ್ ಸ್ಕೂಲಿನ ಮಧುಶ್ರೀ, ಮುಲ್ಕಿ ಕಿಲ್ಪಾಡಿಯ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ಅಕ್ಷತಾ ಕಾಮತ್, ವೀಕ್ಷಾ ವಿ. ಶೆಟ್ಟಿ, ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲಿನ ಅಭಯ್ ಶರ್ಮಾ, ಅಭಿಜ್ಞಾ ಆರ್., ಆತ್ಮೀಯಾ ಎಂ. ಕಶ್ಯಪ್, ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸರಕಾರಿ ಸ್ಕೂಲಿನ ಸಾತ್ವಿಕ್ ಎಚ್.ಎಸ್. 625 ಅಂಕದ ಸಾಧನೆ ಮಾಡಿದ್ದಾರೆ. ದ.ಕ. ಜಿಲ್ಲೆಯ ಶಾಲೆಗಳಲ್ಲಿ ಕಲಿತ 17 ವಿದ್ಯಾರ್ಥಿಗಳು 625 ಸಾಧನೆ ಮಾಡಿರುವುದು ಇದೇ ಮೊದಲಿರಬೇಕು.

Karnataka Secondary School Leaving Certificate (SSLC) result for this year has been announced. Over 8 lac students had written the exams. The result would be published on the SSLC board's website at 1 pm. The exams were held from March 28 to April 11. Addressing media, Minister for Primary and secondary education BC Nagesh said, “The pass percentage this year is 85.63. Pass percentage of girls stand at 90.29 with the boys securing 81.3 percent.