ಬ್ರೇಕಿಂಗ್ ನ್ಯೂಸ್
14-05-26 10:48 pm HK News Staffer ಕರಾವಳಿ
ಉಳ್ಳಾಲ, ಮೇ 14: ಉಳ್ಳಾಲ ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆಯನ್ನು ಹೊತ್ತೊಯ್ಯುತ್ಯಿದ್ದ ಕ್ಯಾಂಟರ್ ನಿಂದ ತಾಂತ್ರಿಕ ದೋಷದಿಂದಾಗಿ ಭಾರೀ ಪ್ರಮಾಣದ ಮೀನಿನ ಎಣ್ಣೆ ಉಳ್ಳಾಲದ ರಾಜ ರಸ್ತೆಯಲ್ಲೇ ಸೋರಿಕೆಯಾಗಿದ್ದು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮೀನಿನ ಕ್ಯಾಂಟರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.
ಉಳ್ಳಾಲ ಕೋಟೆಪುರದಲ್ಲಿ ನಾಯಿಕೊಡೆಗಳಂತೆ ಫಿಶ್ ಮೀಲ್ ಫ್ಯಾಕ್ಟರಿಗಳು ತಲೆ ಎತ್ತಿದ್ದು ಉಳ್ಳಾಲ ನಗರವನ್ನ ಅನಧಿಕೃತ ಕೈಗಾರಿಕಾ ಪ್ರದೇಶವನ್ನಾಗಿಸಿದೆ. ಇಂದು ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಮೀಲ್ ಆಯಿಲನ್ನು ಹೊತ್ಯೊಯ್ಯುತ್ತಿದ್ದ ಬೃಹತ್ ಕ್ಯಾಂಟರ್ ಒಂದರಿಂದ ತಾಂತ್ರಿಕ ದೋಷದಿಂದಾಗಿ ಭಾರೀ ಪ್ರಮಾಣದ ಫಿಶ್ ಆಯಿಲ್ ರಸ್ತೆಯಲ್ಲೇ ಸೋರಿಕೆಯಾಗಿದೆ. ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ವರೆಗೂ ಫಿಶ್ ಆಯಿಲ್ ಸೋರಿಕೆಯಾಗಿದ್ದು ದ್ವಿಚಕ್ರ ವಾಹನ ಸವಾರರಲ್ಲದೆ, ತ್ರಿಚಕ್ರ ವಾಹನ ಸವಾರರು ಕೂಡ ರಸ್ತೆಯಲ್ಲಿ ಜಾರಿ ಬಿದ್ದಿದ್ದಾರೆ.




ಉದ್ರಿಕ್ತ ಸ್ಥಳೀಯರು ಫಿಶ್ ಮೀಲ್ ಆಯಿಲ್ ಸಾಗಿಸುತ್ತಿದ್ದ ಕ್ಯಾಂಟರನ್ನ ಉಳ್ಳಾಲ ಬೈಲಿನಲ್ಲಿ ಅಡ್ಡ ಹಾಕಿ ತಡೆದು ನಿಲ್ಲಿಸಿ ಪ್ರತಿಭಟಿಸಿದ್ದಾರೆ. ಕ್ಯಾಂಟರಿಂದ ಲಕ್ಷಗಟ್ಟಲೆ ಮೌಲ್ಯದ ಆಯಿಲ್ ಸೋರಿಕೆಯಾಗುತ್ತಲೇ ಇದ್ದು ಆಯಿಲನ್ನು ಬೇರೊಂದು ಕ್ಯಾಂಟರ್ ಗೆ ತುಂಬಿಸಲಾಗುತ್ತಿದೆ.
ಘಟನೆಯಿಂದ ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ತನಕ ಏಕಮುಖ ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆಯುದ್ದಕ್ಕೂ ಸೋರಿಕೆಯಾಗಿರುವ ಭಾರೀ ಜಿಡ್ಡಿನ ಫಿಶ್ ಆಯಿಲನ್ನ ಶುದ್ಧಗೊಳಿಸುವುದು ಹೇಗೆಂದು ಪೊಲೀಸರು ಜನಸಾಮಾನ್ಯರಲ್ಲಿ ವಿಚಾರಿಸುತ್ತಿದ್ದಾರೆ.
ಉಳ್ಳಾಲ ನಗರ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಇಲ್ಲಿನ ಜನರು ದಿನ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಫ್ಯಾಕ್ಟರಿಗಳ ಗಬ್ಬು ವಾಸನೆ ಉಳ್ಳಾಲ ಮಾತ್ರವಲ್ಲದೆ ಸಮೀಪದ ಮಂಗಳಾದೇವಿ ಪರಿಸರಕ್ಕೂ ವ್ಯಾಪಿಸಿದೆ. ಇದೀಗ ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲಿ ಫಿಶ್ ಮೀಲ್ ಆಯಿಲ್ ಸೋರಿಕೆಯಾಗಿರುವುದರಿಂದ ಇಡೀ ಉಳ್ಳಾಲವೇ ಗಬ್ಬು ನಾರುವಂತಾಗಿದೆ.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm