ಬ್ರೇಕಿಂಗ್ ನ್ಯೂಸ್
18-04-26 11:09 pm Mangalore Correspondent ಕರಾವಳಿ
ಉಳ್ಳಾಲ, ಏ.18: ನಿರ್ಮಾಣ ಹಂತದ ಲೇ ಔಟ್ ಒಂದರ ಎತ್ತರದ ಆವರಣ ಗೋಡೆಯು ದಿಢೀರ್ ಕುಸಿದು ಬಿದ್ದ ಪರಿಣಾಮ ಲೇಔಟಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರವು ಪಕ್ಕದ ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋ ರಿಕ್ಷಾ, ಬೈಕ್ ಮತ್ತು ಪಕ್ಕದ ಮನೆಗಳ ಆವರಣ ಗೋಡೆ ಮತ್ತು ಗೇಟ್ ಗಳು ಜಖಂಗೊಂಡ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಗುರುನಗರ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಕುಂಪಲ ನಿವಾಸಿ ದೇವೇಶ ಸರಳಾಯ ಎಂಬವರು ಕುಂಪಲ ಗುರುನಗರದ ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಬಳಿ ನಿರ್ಮಿಸುತ್ತಿರುವ ವಸತಿ ಬಡಾವಣೆಯ ಬೃಹತ್ ಆವರಣ ಗೋಡೆಯು ಶನಿವಾರ ಸಂಜೆ ಏಕಾಏಕಿ ಕುಸಿದು ಪಕ್ಕದ ಬಡಾವಣೆಯ ರಸ್ತೆಗೆ ಬಿದ್ದಿದೆ. ಲೇ ಔಟ್ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರವು ಆವರಣ ಗೋಡೆಯ ಜತೆಯಲ್ಲೇ ಪಕ್ಕದ ರಸ್ತೆಗೆ ಉರುಳಿ ಬಿದ್ದಿದ್ದು, ಚಾಲಕನು ಜೆಸಿಬಿ ಯಂತ್ರದಿಂದ ಹೊರ ಜಿಗಿದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಕುಸಿದು ಬಿದ್ದ ಆವರಣ ಗೋಡೆಯ ಪಕ್ಕದ ರಸ್ತೆಯಲ್ಲಿ ನಿತ್ಯವೂ ಸಂಜೆ ಸ್ಥಳೀಯ ಮಕ್ಕಳು ಆಟವಾಡುತ್ತಿದ್ದು ಘಟನೆ ಸಂಜೆ ನಾಲ್ಕು ಗಂಟೆಗೆ ಘಟಿಸಿದ್ದರಿಂದ ಮತ್ತು ಆ ವೇಳೆ ರಸ್ತೆಯಲ್ಲಿ ಬಿಸಿಲು ಇದ್ದ ಕಾರಣ ಮಕ್ಕಳು ಆಟವಾಡಲು ಮನೆಗಳಿಂದ ಹೊರ ಬಂದಿರಲಿಲ್ಲ. ಮಕ್ಕಳು ಆಟವಾಡುತ್ತಿದ್ದ ವೇಳೆ ಘಟನೆ ನಡೆಯುತ್ತಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ನೀರಿನ ಹರಿವು ಮತ್ತು ಮಣ್ಣು ಒದ್ದೆಯಾದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರುತ್ತಿದ್ದರೆ ಘೋರ ಅನಾಹುತವೇ ಸಂಭವಿಸುತ್ತಿತ್ತು. ಕಳಪೆ ಕಾಮಗಾರಿ ನಡೆಸಿ ನಿರ್ಲಕ್ಷ್ಯ ವಹಿಸಿ ಘಟನೆಗೆ ಕಾರಣರಾದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಂದೋ ನಾಳೆಯೋ ಮಳೆ ಸುರಿದಲ್ಲಿ ಕುಸಿದ ಆವರಣ ಗೋಡೆಯ ಮಣ್ಣೆಲ್ಲ ಸ್ಥಳೀಯ ಮನೆಗಳ ಒಳಗೆ ನುಗ್ಗುವ ಭೀತಿ ಎದುರಾಗಿದೆ.
ಸ್ಥಳೀಯ ಬಡಾವಣೆ ನಿವಾಸಿ ಸುಶಿತ್ ರಾವ್ ಅವರ ಕಾರು ಮತ್ತು ಆಟೋ ರಿಕ್ಷಾ, ರಕ್ಷಿತ್ ಎಂಬವರ ಮೋಟಾರ್ ಬೈಕ್ ಜಖಂಗೊಂಡಿದೆ. ಆವರಣ ಗೋಡೆ ಕುಸಿದ ರಭಸಕ್ಕೆ ಪಕ್ಕದ ಬಡಾವಣೆಯ ಮನೆಗಳ ಆವರಣ ಗೋಡೆಗಳು ಮತ್ತು ಗೇಟ್ ಗಳು ಜಖಂಗೊಂಡಿವೆ. ಕಳಪೆ ಕಾಮಗಾರಿಯಿಂದಲೇ ಎತ್ತರದ ಆವರಣ ಗೋಡೆ ಕುಸಿದು ಬಿದ್ದಿದೆಯೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ, ಸದಸ್ಯರಾದ ಮನೋಜ್ ಕಟ್ಟೆಮನೆ, ಮೋಹನ್ ಶೆಟ್ಟಿ ಕುಂಪಲ, ಜಯ ಪೂಜಾರಿ, ಪುರಸಭಾ ಅಧಿಕಾರಿಗಳು ಮತ್ತು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
17-05-26 08:55 pm
HK News Staffer
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
ಹಿಜಾಬ್ಗೆ ಗ್ರೀನ್ ಸಿಗ್ನಲ್; ಮತ್ತೆ ಭುಗಿಲೆದ್ದ ವಿವ...
14-05-26 10:19 am
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
16-05-26 10:13 pm
HK News Desk
ಗುಡುಗು - ಮಿಂಚಿನ ಬಿರುಗಾಳಿಗೆ ಉತ್ತರ ಪ್ರದೇಶದಲ್ಲಿ...
16-05-26 02:01 pm
ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ...
15-05-26 04:16 pm
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ; ಮಿತವ್ಯ...
15-05-26 08:54 am
ಕೇರಳಕ್ಕೆ ವಿಡಿ ಸತೀಶನ್ ಹೊಸ ಮುಖ್ಯಮಂತ್ರಿ ; ರಾಹುಲ್...
14-05-26 12:36 pm
16-05-26 09:19 pm
HK News Staffer
ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ದೇಶದಲ್ಲೇ ಮೊದಲ...
16-05-26 09:16 pm
ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿ...
16-05-26 07:22 pm
ಮಂಗಳೂರು ಜೈಲಿನಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ...
16-05-26 01:13 pm
ಉಳ್ಳಾಲದಲ್ಲಿ ಫಿಶ್ ಮೀಲ್ ಕ್ಯಾಂಟರ್ ಆಟಾಟೋಪ ; ರಸ್ತೆ...
14-05-26 10:48 pm
17-05-26 09:10 pm
HK News Staffer
ಕೋಲಾರ; ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ ಮತ್ತು ಇಬ...
17-05-26 08:41 pm
ಕೊಡಚಾದ್ರಿ ಬೆಟ್ಟದಿಂದ ಮರಳುತ್ತಿದ್ದ ಪ್ರವಾಸಿಗರ ಜೀಪ...
17-05-26 08:14 pm
ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ; ಎಸಿ ಕೋಚ...
17-05-26 05:51 pm
ಮಂಗಳೂರಿನಲ್ಲಿ ಭೀಕರ ಲಿಫ್ಟ್ ದುರಂತ; ಲಿಫ್ಟ್ ನಲ್ಲಿ...
17-05-26 05:49 pm