ಬ್ರೇಕಿಂಗ್ ನ್ಯೂಸ್
19-07-25 12:26 pm Mangalore Correspondent ಕ್ರೈಂ
ಮಂಗಳೂರು, ಜುಲೈ 19 : ಸಾಲ ನೀಡುವ ನೆಪದಲ್ಲಿ ಉದ್ಯಮಿಗಳನ್ನು ಯಾಮಾರಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿ ಸಿಕ್ಕಿಬಿದ್ದಿರುವ ಚಾಲಾಕಿ ವಂಚಕ ರೋಷನ್ ಸಲ್ದಾನ್ಹ ದೇಶಾದ್ಯಂತ ನೆಟ್ವರ್ಕ್ ಸಾಧಿಸಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಕಳೆದ 3-4 ತಿಂಗಳ ಅವಧಿಯಲ್ಲಿ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಲಕ್ನೋ, ಸಾಂಗ್ಲಿ, ಬಾಗಲಕೋಟೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಉದ್ಯಮಿಗಳನ್ನು ಬಲೆಗೆ ಹಾಕ್ಕೊಂಡು 35-40 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಏಜಂಟರನ್ನು ಇಟ್ಟುಕೊಂಡು ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಉದ್ಯಮಿಗಳನ್ನು ಯಾಮಾರಿಸುತ್ತಿದ್ದ ಮಂಗಳೂರಿನ ಚಾಲಾಕಿ ವಂಚಕ ರೋಶನ್ ಸಲ್ದಾನಾನನ್ನು ಮಂಗಳೂರಿನ ಸಿಇಎನ್ ಪೊಲೀಸರು ಗುರುವಾರ ರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಜಪ್ಪಿನಮೊಗರಿನ ತಂದೊಳಿಗೆ ಎಂಬಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಂಡಿದ್ದ ರೋಶನ್, ಸಿರಿವಂತರನ್ನು ಮನೆಗೇ ಕರೆಸಿಕೊಳ್ಳುತ್ತಿದ್ದ. ವಿದೇಶಿ ಮದ್ಯದ ಜೊತೆಗೆ ಮಲೇಶ್ಯನ್ ಹುಡುಗಿಯರನ್ನು ಸಪ್ಲೈ ಮಾಡಿ ತನ್ನ ಬಲೆಗೆ ಕೆಡವುತ್ತಿದ್ದ. ಆನಂತರ, ಕೇವಲ ಮೂರು ಪರ್ಸೆಂಟ್ ಬಡ್ಡಿಗೆ ನೂರು ಕೋಟಿಯ ಸಾಲದ ಮಾತುಕತೆ ಕುದುರಿಸಿ ಸ್ಟಾಂಪ್ ಡ್ಯೂಟಿ ಹೆಸರಲ್ಲಿ 3ರಿಂದ ನಾಲ್ಕು ಕೋಟಿ ನಗದು ಪಡೆದು ಯಾಮಾರಿಸುತ್ತಿದ್ದ ಎನ್ನೋದು ಬಯಲಾಗಿದೆ.
ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಮನೆಯ ಒಳಗಡೆಯೇ ಹೈಫೈ ಬಾರ್ ಅಂಡ್ ರೆಸ್ಟೋರೆಂಟ್, ಪ್ರತ್ಯೇಕ ಬೆಡ್ ರೂಮ್ ಮಾಡಿರುವುದು ಮತ್ತು ಅಡಗುತಾಣವನ್ನೂ ಮಾಡಿಕೊಂಡಿರುವುದೂ ಪತ್ತೆಯಾಗಿದೆ. ಪೊಲೀಸರು ಅಲ್ಲಿದ್ದ ವಿದೇಶಿ ಮದ್ಯ ಒಳಗೊಂಡ ಎಲ್ಲ ಸಂಗ್ರಹವನ್ನು ಜಪ್ತಿ ಮಾಡಿದ್ದು 6.72 ಲಕ್ಷ ಮೌಲ್ಯದ ಮದ್ಯವನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಅಲ್ಲದೆ, ಆರೋಪಿ ಮನೆಯಿಂದ ಹಲವಾರು ದಾಖಲಾತಿಗಳನ್ನು, ಖಾಲಿ ಚೆಕ್ ಗಳನ್ನು ಸೀಜ್ ಮಾಡಿರುವ ಪೊಲೀಸರು 667 ಗ್ರಾಮ್ ಚಿನ್ನಾಭರಣಗಳು, ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ರೋಶನ್ ಸಲ್ದಾನಾ ವಿರುದ್ಧ ಸದ್ಯಕ್ಕೆ ಮಂಗಳೂರು, ಚಿತ್ರದುರ್ಗ ಮತ್ತು ಮುಂಬೈನಲ್ಲಿ ಕೇಸು ದಾಖಲಾಗಿರುವುದು ಪತ್ತೆಯಾಗಿದ್ದು, ಹಲವು ನಗರಗಳಲ್ಲಿ ಉದ್ಯಮಿಗಳನ್ನು ಗುರಿಯಾಗಿಸಿ ವಂಚನಾ ಜಾಲ ಹೆಣೆದಿರುವುದು ಪತ್ತೆಯಾಗಿದೆ. 3-4 ತಿಂಗಳಲ್ಲಿ 40 ಕೋಟಿಯಷ್ಟು ವ್ಯವಹಾರ ಮಾಡಿರುವುದು ಪತ್ತೆಯಾಗಿದ್ದು ಇದಕ್ಕೂ ಹಿಂದೆ ಬ್ಯಾಂಕ್ ಖಾತೆಯಲ್ಲಿ ಎಷ್ಟು ವಹಿವಾಟು ಆಗಿದೆ, ನಗದಿನ ರೂಪದಲ್ಲಿ ಯಾರ ಜೊತೆಗೆಲ್ಲ ವ್ಯವಹಾರ ನಡೆಸಿದ್ದಾನೆ ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಆರೋಪಿ ವಿರುದ್ಧ ಅಬಕಾರಿ ಕೇಸು ಸೇರಿದಂತೆ ಬಿಎನ್ಎಸ್ ಪ್ರಕಾರ 316-2, 316-5, 318-2, 318-3, 61-2 ಪ್ರಕಾರ ಕೇಸು ದಾಖಲಿಸಿದ್ದು, ಆತನ ಜೊತೆಗಿದ್ದವರ ಪತ್ತೆಗಾಗಿ ಬಲೆ ಬೀಸಲಾಗಿದೆ.
Roshan Saldanha, a cunning conman from Mangaluru, who posed as a loan agent and defrauded businessmen across major Indian cities, has been arrested by the CEN police in a swift late-night operation. The investigation has revealed that Saldanha built an elaborate nationwide network and scammed entrepreneurs to the tune of ₹35-40 crore in just the past 3-4 months.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am