ಬ್ರೇಕಿಂಗ್ ನ್ಯೂಸ್
09-11-25 03:47 pm Bangalore Correspondent ಕರ್ನಾಟಕ
ಬೆಂಗಳೂರು, ನ.9 : ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಕೋ ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ದುರ್ಬಳಕೆ ನಡೆದಿರುವ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸೊಸೈಟಿ ಅಕೌಂಟೆಂಟ್ ಲಕ್ಷ್ಮಿ ಜಗದೀಶ್ ಮನೆಯಲ್ಲಿ ಅರ್ಧ ಕೆ.ಜಿ.ಗೂ ಅಧಿಕ ಚಿನ್ನ, ಆಸ್ತಿ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳಾದ ಸೊಸೈಟಿಯ ಸಿಇಒ ಜಿ. ಗೋಪಿನಾಥ್, ಲೆಕ್ಕಾಧಿಕಾರಿ ಬಿ.ಎಲ್. ಜಗದೀಶ್, ಪತ್ನಿ ಲಕ್ಷ್ಮಿ ಜಗದೀಶ್ ಅವರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಶೋಧದ ವೇಳೆ ಸುಮಾರು ಅರ್ಧ ಕೆಜಿ ಚಿನ್ನಾಭರಣ, ಥಾರ್ ಜೀಪು, ಬಿಎಂಡಬ್ಲ್ಯು ಸೇರಿ ಐಷಾರಾಮಿ ಕಾರುಗಳು, ದುಬಾರಿ ಮೌಲ್ಯದ ಬೈಕ್ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಲಾಗಿದೆ. ಜತೆಗೆ, ಭೂಮಿ ಖರೀದಿಯ ದಾಖಲೆಗಳು ಸಿಕ್ಕಿವೆ. ಆರೋಪಿಗಳು ಅಕ್ರಮವಾಗಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಸಹಕಾರ ಸಂಘದ ಕಚೇರಿಯಲ್ಲಿ ಪೊಲೀಸರು ಮಹಜರು ನಡೆಸಿ, ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜರಾಜೇಶ್ವರಿನಗರ, ಜೆ.ಪಿ. ನಗರ ಮತ್ತು ಅಂಜನಾಪುರದಲ್ಲಿರುವ ಆರೋಪಿಗಳಾದ ಸಿಇಒ ಜಿ. ಗೋಪಿನಾಥ್, ಲಕ್ಷ್ಮಿ ಆರ್., ಆರೋಪಿ ನಂಬರ್ 9 ಲಿಂಗೇಗೌಡ ಮತ್ತು ಆರೋಪಿ ನಂಬರ್ 10 ರಮಾನುಜ ಅವರ ಮನೆಗಳಲ್ಲೂ ಶೋಧ ನಡೆಸಲಾಗಿದೆ.
ಅವ್ಯವಹಾರದ ಬಗ್ಗೆ ಸಂಘದ ಅಧ್ಯಕ್ಷ ಸಿ.ಜೆ. ಮುರಳೀಧರ್ ಅವರು ಕಳೆದ ವಾರ ದೂರು ಸಲ್ಲಿಸಿದ್ದರು. ಸುಮಾರು 300 ನೌಕರರು ಮತ್ತು ನಿವೃತ್ತ ನೌಕರರು ಠೇವಣಿ ಇಟ್ಟಿದ್ದ 70 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
In connection with the ₹70 crore embezzlement case in the Employees’ Provident Fund (EPF) Cooperative Society, the Cubbon Park Police have seized over half a kilogram of gold ornaments and property documents from the residence of the society’s accountant, Lakshmi Jagadish.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm